Friday, July 31, 2026

BDA Apartments

Home Cinema ಕುತೂಹಲ ಹುಟ್ಟಿಸಿದ ವಿಶ್ವಸುಂದರಿ ಮಾನುಷಿ ಚಿಲ್ಲರ್- ಹೊಂಬಾಳೆ ಫಿಲಂಸ್’ನ ವಿಜಯ್ ಭೇಟಿ

ಕುತೂಹಲ ಹುಟ್ಟಿಸಿದ ವಿಶ್ವಸುಂದರಿ ಮಾನುಷಿ ಚಿಲ್ಲರ್- ಹೊಂಬಾಳೆ ಫಿಲಂಸ್’ನ ವಿಜಯ್ ಭೇಟಿ

ಬೆಂಗಳೂರು, ಜೂನ್ 25, 2022 (www.justkannada.in): ಕೆಜಿಎಫ್ ಚಾಪ್ಟರ್ 2 ಸಿನಿಮಾದ ಭರ್ಜರಿ ಯಶಸ್ಸಿನ ನಂತರ ಹೊಂಬಾಳೆ ಫಿಲಂಸ್ ಬಾಲಿವುಡ್ ಸಿನಿಮಾ ನಿರ್ಮಾಣದ ಕುರಿತು ನಿರೀಕ್ಷೆ ಹುಟ್ಟಿಕೊಂಡಿದೆ.

ಈ ನಡುವೆ ವಿಶ್ವ ಸುಂದರಿ ಮಾನುಷಿ ಚಿಲ್ಲರ್ ಅವರನ್ನು ಹೊಂಬಾಳೆ ಫಿಲಂಸ್​ನ ವಿಜಯ್ ಕಿರಗಂದೂರು ಭೇಟಿ ಮಾಡಿದ್ದು, ಹೊಸ ನಿರೀಕ್ಷೆಗಳನ್ನು ಹುಟ್ಟಿಸಿದೆ.

ಮಾನುಷಿ ಚಿಲ್ಲರ್ 2017 ರಲ್ಲಿ ಫೆಮಿನಾ ಮಿಸ್ ಇಂಡಿಯಾ ಆಗಿದ್ದರು. ಅಲ್ಲದೇ ಮಾನುಷಿ ಚಿಲ್ಲರ್ ವಿಶ್ವ ಸುಂದರಿ 2017 ಕಿರೀಟವನ್ನೂ ಪಡೆದುಕೊಂಡಿದ್ದರು.

ಇತ್ತೀಚೆಗಷ್ಟೇ ಅವರ ಮೊದಲ ಸಿನಿಮಾ ‘ಸಾಮ್ರಾಟ್ ಪೃಥ್ವಿರಾಜ್’ ತೆರೆಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಅವರು ವಿಜಯ್ ಕಿರಗಂದೂರು ಅವರನ್ನು ಭೇಟಿ ಮಾಡಿದ್ದಾರೆ.