Tuesday, September 15, 2026

BDA Apartments

ದೇಶದಲ್ಲಿ ಹೊಸದಾಗಿ 15,940 ಕೋವಿಡ್ ಪ್ರಕರಣಗಳು ದೃಢ BDA JK_Adv BDA Adv
Home Front Page ದೇಶದಲ್ಲಿ ಹೊಸದಾಗಿ 15,940 ಕೋವಿಡ್ ಪ್ರಕರಣಗಳು ದೃಢ.

ದೇಶದಲ್ಲಿ ಹೊಸದಾಗಿ 15,940 ಕೋವಿಡ್ ಪ್ರಕರಣಗಳು ದೃಢ.

ನವದೆಹಲಿ,ಜೂನ್,25,2022(www.justkannada.in): ದೇಶದಲ್ಲಿ  ಕೋವಿಡ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು ಕಳೆದ 24 ಗಂಟೆಗಳಲ್ಲಿ 15,940 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿವೆ.

ಈ ಕುರಿತು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, ಕಳೆದ 24 ಗಂಟೆಗಲ್ಲಿ ಕೋವಿಡ್ ಗೆ 20 ಮಂದಿ ಬಲಿಯಾಗಿದ್ದಾರೆ. ಈ ಮೂಲಕ ಕೋವಿಡ್​ನಿಂದ  ಮೃತಪಟ್ಟವರ ಸಂಖ್ಯೆ 5,24,974ಕ್ಕೆ ಹೆಚ್ಚಳವಾಗಿದೆ. ದೇಶದಲ್ಲಿ ಸಕ್ರಿಯ ಪ್ರಕರಣಗಳು 91,779 ಇದ್ದು, ಕೋವಿಡ್ ಪಾಸಿಟಿವಿಟಿ ದರ ಶೇ.4.39ರಷ್ಟಿದೆ. ದೇಶದಲ್ಲಿ ಒಂದೇ ದಿನದಲ್ಲಿ 15,73,341 ಮಂದಿ ಕೊರೊನಾ ಲಸಿಕೆ ನೀಡಲಾಗಿದೆ.

ಕಳೆದ 24 ಗಂಟೆಗಳಲ್ಲಿ 12,475ಮಂದಿ ಗುಣಮುಖರಾಗಿರುವುದರಿಂದಿಗೆ ಒಟ್ಟು ಚೇತರಿಸಿಕೊಂಡವರ ಸಂಖ್ಯೆ 4,27,61,481ಕ್ಕೆ ಏರಿಕೆಯಾಗಿದೆ.

Key words: 15,940 -new cases -Covid – country.