Tuesday, September 15, 2026

BDA Apartments

ನಿನಾಸಂ ಸತೀಶ್ -ಶ್ರದ್ಧಾ ಶ್ರೀನಾಥ್ ನಟನೆಯ ‘ಡಿಯರ್ ವಿಕ್ರಮ್’ ವೂಟ್ ಸೆಲೆಕ್ಟ...
Home Cinema ನಿನಾಸಂ ಸತೀಶ್ -ಶ್ರದ್ಧಾ ಶ್ರೀನಾಥ್ ನಟನೆಯ ‘ಡಿಯರ್ ವಿಕ್ರಮ್’ ವೂಟ್ ಸೆಲೆಕ್ಟ್ ನಲ್ಲಿ ರಿಲೀಸ್

ನಿನಾಸಂ ಸತೀಶ್ -ಶ್ರದ್ಧಾ ಶ್ರೀನಾಥ್ ನಟನೆಯ ‘ಡಿಯರ್ ವಿಕ್ರಮ್’ ವೂಟ್ ಸೆಲೆಕ್ಟ್ ನಲ್ಲಿ ರಿಲೀಸ್

ಬೆಂಗಳೂರು, ಜೂನ್ 25, 2022 (www.justkannada.in): ನಟ ನಿನಾಸಂ ಸತೀಶ್ ಹಾಗೂ ಶ್ರದ್ಧಾ ಶ್ರೀನಾಥ್ ನಟನೆಯ ಡಿಯರ್ ವಿಕ್ರಮ್” ವೂಟ್ ಸೆಲೆಕ್ಟ್ ನಲ್ಲಿ ಬಿಡುಗಡೆಯಾಗಿದೆ.

ಕೆಲದಿನಗಳ ಹಿಂದಷ್ಟೇ ಬಿಡುಗಡೆಯಾಗಿದ್ದ ಚಿತ್ರದ ಟೀಸರ್ ಸಿನಿರಸಿಕರ ಗಮನ ಸೆಳೆದಿತ್ತು. ಈಗ ಬಿಡುಗಡೆಯಾಗಿರುವ ಟ್ರೇಲರ್ ಆ ಕುತೂಹಲವನ್ನು ಇಮ್ಮಡಿಗೊಳಿಸಿದೆ.

ಕೆ ಎಸ್ ನಂದೀಶ್ ‘ಡಿಯರ್ ವಿಕ್ರಮ್’ ಸಿನಿಮಾವನ್ನು ಬರೆದು ನಿರ್ದೇಶಿಸಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯ, ಹಾಸನ, ಭಟ್ಕಳ, ಕರ್ನೂಲ್ ಅಲ್ಲದೆ ಮಲೇಶಿಯಾದಲ್ಲೂ ಚಿತ್ರೀಕರಣ ಮಾಡಲಾಗಿದೆ.

ನಟ ನಿನಾಸಂ ಸತೀಶ್, ಶ್ರದ್ಧಾ ಶ್ರೀನಾಥ್ ಅವರೊಂದಿಗೆ ವಸಿಷ್ಟ ಸಿಂಹ, ಸೋನು ಗೌಡ ಅಚ್ಯುತ್ ಕುಮಾರ್ ಸೇರಿದಂತೆ ಹಲವು ಪ್ರಮುಖ ನಟ ನಟಿಯರು ನಟಿಸಿದ್ದಾರೆ.