Wednesday, September 30, 2026

BDA Apartments

ಸಚಿವ ಸ್ಥಾನ: ಹಳ್ಳಿಹಕ್ಕಿಗೆ ಕೈ ಕೊಟ್ಟ ಶಾಸಕ ಸುಧಾಕರ್ ! BDA JK_Adv BDA Adv
Home Front Page ಸಚಿವ ಸ್ಥಾನ: ಹಳ್ಳಿಹಕ್ಕಿಗೆ ಕೈ ಕೊಟ್ಟ ಶಾಸಕ ಸುಧಾಕರ್ !

ಸಚಿವ ಸ್ಥಾನ: ಹಳ್ಳಿಹಕ್ಕಿಗೆ ಕೈ ಕೊಟ್ಟ ಶಾಸಕ ಸುಧಾಕರ್ !

ಮೈಸೂರು, ಜನವರಿ 26, 2019 (www.justkannada.in): ಸೋತವರಿಗೆ ಮಂತ್ರಿಗಿರಿ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಎಚ್‌.ವಿಶ್ವನಾಥ್‌ಗೆ ಮತ್ತೊಬ್ಬ ಶಾಸಕ ಕೈಕೊಟ್ಟಿದ್ದಾರೆ.

ಸುಪ್ರೀಂಕೋರ್ಟ್ ತೀರ್ಪು ಇದೆ. ಕೆಲವರು ಸುಪ್ರೀಂ ತೀರ್ಪುನ್ನ ವಿಮರ್ಶಿಸಿದ್ದಾರೆ. ಅದನ್ನು ಆಧರಿಸಿ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಮೈಸೂರು ಜಿಲ್ಲೆ ಸುತ್ತೂರಿನಲ್ಲಿ ನೂತನ ಶಾಸಕ ಡಾ.ಸುಧಾಕರ್ ಹೇಳಿದ್ದಾರೆ.

ಸಚಿವ ಸ್ಥಾನ ನೀಡುವ ವಿಚಾರದಲ್ಲಿ ನಾವು ಪಕ್ಷದ ನಿಲುವಿಗೆ ಬದ್ಧರಾಗಿದ್ದೇವೆ.  ಹೈಕಮಾಂಡ್ ಏನು ತೀರ್ಮಾನ ತೆಗೆದುಕೊಳ್ಳುತ್ತದೆಯೋ ಅದನ್ನು ಒಪ್ಪಿಕೊಳ್ಳುತ್ತೇವೆ.  ನಾವೆಲ್ಲರೂ ಸ್ನೇಹಿತರಂತೆಯೆ ಇದ್ದೇವೆ ಎಂದ ಸುಧಾಕರ್ ಹೇಳಿದರು.

ಆದರೆ ಒಗ್ಗಟ್ಟಿನ ಬಗ್ಗೆ ತುಟಿ ಬಿಚ್ಚದ ಸುಧಾಕರ್, ವಿಶ್ವನಾಥ್ ಹೇಳಿಕೆಗೆ ಸಾಥ್ ಕೊಡಲು ಹಿಂದೇಟು ಹಾಕಿದರು.