Friday, August 14, 2026

BDA Apartments

Home Front Page ಸರಕಾರ ರಚನೆಗೆ ಕಾರಣರಾದ ಎಲ್ಲರಿಗೂ ಮಂತ್ರಿ ಪದವಿ ನೀಡ್ಬೇಕು: ಸಂಸದ ಶ್ರೀನಿವಾಸ ಪ್ರಸಾದ್

ಸರಕಾರ ರಚನೆಗೆ ಕಾರಣರಾದ ಎಲ್ಲರಿಗೂ ಮಂತ್ರಿ ಪದವಿ ನೀಡ್ಬೇಕು: ಸಂಸದ ಶ್ರೀನಿವಾಸ ಪ್ರಸಾದ್

ಮೈಸೂರು, ಜನವರಿ 26, 2019 (www.justkannada.in): ಸಚಿವ ಸಂಪುಟ ವಿಸ್ತರಣೆ ವಿಚಾರಕ್ಕೆ ಸಂಬಂಧಪಟ್ಟಂತೆ 17 ಮಂದಿ ಪರ ಶ್ರೀ‌ನಿವಾಸ್ ಪ್ರಸಾದ್ ಬ್ಯಾಟಿಂಗ್ ಮಾಡಿದ್ದಾರೆ.

ನಾನು ಹಿಂದೆ ಹೇಳಿದ್ದ ಮಾತಿಗೆ ಬದ್ಧ. ಇನ್ನೇರಡು ಮೂರು ದಿನದಲ್ಲಿ ಸಚಿವ ಸಂಪುಟ ರಚನೆ ಆಗುತ್ತೆ.
ಈಗಾಗಲೇ ನಾನು ಮಾತನಾಡಿದ್ದೇನೆ. ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಬೇಗ ಸಚಿವ ಸಂಪುಟ ರಚನೆ ಮಾಡಿ ಅಂತ‌ ಹೇಳಿದ್ದೇನೆ. ನಾನು ಹಿಂದೆ ಹೇಳಿದ್ದ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ ಎಂದು ಪ್ರಸಾದ್ ಹೇಳಿದ್ದಾರೆ.

ಸರ್ಕಾರ ರಚನೆ ಆಗಲು ಕಾರಣರಾದ 17 ಜನರಿಗೆ ಸ್ಥಾನ ನೀಡಬೇಕು‌. ಈ ಬಗ್ಗೆ ನಾನು ಮತ್ತೆ ಮತ್ತೆ ಮಾತನಾಡುವುದಿಲ್ಲ. ಇವತ್ತು ಸಿಎಂ ಯಡಿಯೂರಪ್ಪ ಮೈಸೂರಿಗೆ ಬಂದಿದ್ದಾರೆ. ನಾನು ಸಿಎಂ ಯಡಿಯೂರಪ್ಪರನ್ನ ಇವತ್ತು ಭೇಟಿ ಮಾಡಲ್ಲ ಎಂದು ಮೈಸೂರಿನಲ್ಲಿ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಹೇಳಿದ್ದಾರೆ.