ಇನ್ನೂ ಮೂರು ವರ್ಷ ಬಿಎಸ್ವೈ ಅಧಿಕಾರ: ಸಿಎಂ ಸ್ಥಾನದ ಮೇಲೆ ಆಸೆ ಬಿಡಿ ಎಂದ ಶಾಸಕ ಜಿಟಿ ದೇವೇಗೌಡ

ಮೈಸೂರು, ಜನವರಿ 26, 2019 (www.justkannada.in): ಏನೇ ಆಗಲಿ ಯಡಿಯೂರಪ್ಪ ಮೂರು ವರ್ಷ ಮುಖ್ಯಮಂತ್ರಿ ಆಗಿರುತ್ತಾರೆ.  ಉಳಿದವರು ಆಸೆ ಇಟ್ಟುಕೊಳ್ಳಬೇಡಿ ಎಂದು ಶಾಸಕ ಜಿ.ಟಿ.ದೇವೇಗೌಡ ಅವರು ಬಿಎಸ್‌ವೈ ಪರ ಬ್ಯಾಟಿಂಗ್ ಮಾಡಿದ್ದಾರೆ.

ಬಿಜೆಪಿ ಸರ್ಕಾರ ಉಳಿಯಲ್ಲ, ಉಪಚುನಾವಣೆಯಲ್ಲಿ ಬಹುಮತ ಬರಲ್ಲ, ಸಚಿವ ಸಂಪುಟ ರಚನೆ ಆಗಲ್ಲ ಅಂತ ಏನೇನೋ ಹೇಳಿದ್ರು. ಯಾರು ಏನೇ ಹೇಳಲಿ, ಏನೇ ಆಗಲಿ.  ಯಡಿಯೂರಪ್ಪ ರಾಜ್ಯಕ್ಕೆ ಮೂರು ವರ್ಷ ಸುಭದ್ರ ಸರ್ಕಾರ ಕೊಡುತ್ತಾರೆ. ಎಲ್ಲರೂ ಅವರಿಗೆ ಸಹಕಾರ ಕೊಡಬೇಕು ಎಂದು ಹೇಳಿದ್ದಾರೆ.

ಸಚಿವ ಸಂಪುಟ ವಿಸ್ತರಣೆ ವಿಚಾರಕ್ಕೆ ಸಂಬಂಧಿಸಿದಂತೆ ಎಲ್ಲರಿಗೂ ಸಚಿವ ಸ್ಥಾನ ಸಿಗದೇ ಇರಬಹುದು.
ಆದ್ರೆ ಸಂಪುಟ ದರ್ಜೆಯ ಸ್ಥಾನಮಾನ ಸಿಕ್ಕೇ ಸಿಗುತ್ತೆ. ಯಾರಿಗೆ ಯಾವ ಹುದ್ದೆ ನೀಡಬೇಕು, ನಿಗಮ- ಮಂಡಳಿ ನೀಡಬೇಕು ಅಂತ ಯಡಿಯೂರಪ್ಪ ಅವರಿಗೆ ಗೊತ್ತಿದೆ. ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುತ್ತಾರೆ ಎಂದಿದ್ದಾರೆ.

ರಾಜೀನಾಮೆ ಕೊಟ್ಟು ಬಂದವರೂ ಸಾಕಾಗಿ ಹೋಗಿದ್ದಾರೆ. ಸಚಿವ ಸ್ಥಾನ ಸಿಕ್ಕರೂ, ಸಿಗದೇ ಇದ್ದರೂ ಏನೂ ಮಾಡಲು ಸಾಧ್ಯವಿಲ್ಲ. ಇದು ಅಲ್ಲಿರುವ ಎಲ್ಲರಿಗೂ ಗೊತ್ತು. ಪರೋಕ್ಷವಾಗಿ ವಿಶ್ವನಾಥ್‌ಗೆ ಜಿ.ಟಿ.ಡಿ. ಟಾಂಗ್ ನೀಡಿದ್ದಾರೆ.