Saturday, September 12, 2026

BDA Apartments

ಷಡ್ಯಂತ್ರ ಮಾಡ್ತಿದ್ದಾರೆ ಎಂದಿದ್ದಾರೆ: ಹಾಗಾದ್ರೆ ಸಿಡಿ ಇದೆಯಾ..? ಮಾಜಿ ಸಿಎಂ ...
Home Front Page  ಷಡ್ಯಂತ್ರ ಮಾಡ್ತಿದ್ದಾರೆ ಎಂದಿದ್ದಾರೆ: ಹಾಗಾದ್ರೆ ಸಿಡಿ ಇದೆಯಾ..?  ಮಾಜಿ ಸಿಎಂ ಸಿದ್ಧರಾಮಯ್ಯ…..

 ಷಡ್ಯಂತ್ರ ಮಾಡ್ತಿದ್ದಾರೆ ಎಂದಿದ್ದಾರೆ: ಹಾಗಾದ್ರೆ ಸಿಡಿ ಇದೆಯಾ..?  ಮಾಜಿ ಸಿಎಂ ಸಿದ್ಧರಾಮಯ್ಯ…..

ಬೆಂಗಳೂರು,ಮಾರ್ಚ್,6,2021(www.justkannada.in):  ಸಚಿವ ಸುಧಾಕರ್ ಅವರು ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಏಕೆ ಹೀಗೆ ಹೇಳಿದ್ದಾರೆ ಗೊತ್ತಿಲ್ಲ. ಹಾಗಾದ್ರೆ ಸಿಡಿ ಇದೆಯಾ,,? ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಪ್ರಶ್ನಿಸಿದರು.jk

ಆರು ಮಂದಿ ಸಚಿವರು ಕೋರ್ಟ್ ಮೊರೆ ಹೋದ ವಿಚಾರ ಕುರಿತು ಪ್ರತಿಕ್ರಿಯಿಸಿದ ಮಾಜಿ ಸಿಎಂ ಸಿದ್ಧರಾಮಯ್ಯ, ‘ರಾಜಕಾರಣಿಗಳು ಅಂದರೆ ಲಫಂಗರು ಅನ್ನುವ ರೀತಿ ಆಗುತ್ತಿದೆ’ ‘ಸಿಡಿ ಇದೆ ಎಂದು ಗೊತ್ತಿದ್ದರೆ ಮಾತ್ರ ಅದನ್ನು ರಾಜಕೀಯ ಷಡ್ಯಂತ್ರ ಎಂದು ಹೇಳಿಕೊಳ್ಳುತ್ತಾರೆ. ಹಾಗಾದರೆ ಸಿಡಿ ಇದೆಯಾ?’ ಎಂದು ಟೀಕಿಸಿದರು.

Former CM- Siddaramaiah- warns- implemented-anugraha
siddaramaih#profile..

ಸಮಾಜಕ್ಕೆ ರಾಜಕಾರಣಿಗಳ ಬಗ್ಗೆ ತಪ್ಪು ಗ್ರಹಿಕೆ ರವಾನೆಯಾಗುವಂತೆ ನಡೆದುಕೊಳ್ಳುತ್ತಿದ್ದಾರೆ’ ಎಂದರು. ಹಾಗೆಯೇ ಬಿಜೆಪಿಯಲ್ಲಿರುವವರು ಯಾರು ಸಾಚಾ ಅಲ್ಲ ಎಂದು ನುಡಿದರು.

Key words:  ministers- court- Former CM- Siddaramaiah.