ಸೋತವರಿಗೆ ಸಚಿವ ಸ್ಥಾನ ನೀಡುತ್ತಾ ಹೋದ್ರೆ ಪಕ್ಷಕ್ಕೆ ಮುಜುಗರ- ಶಾಸಕ ಎಂಪಿ ರೇಣುಕಾಚಾರ್ಯ ಟ್ವೀಟ್…

ಬೆಂಗಳೂರು,ಫೆ,5,2020(www.justkannada.in):  ನಾಳೆ ಸಚಿವ ಸಂಪುಟ ವಿಸ್ತರಣೆಗೆ ದಿನಾಂಕ ಫಿಕ್ಸ್ ಆಗಿದ್ದು, ಈ ನಡುವೆ ಸಿ.ಪಿ ಯೋಗೇಶ್ವರ್ ಗೆ ಸಚಿವ ಸ್ಥಾನ ನೀಡಲು ಕೆಲ ಮೂಲ ಬಿಜೆಪಿ ಶಾಸಕರು ವಿರೋಧ ವ್ಯಕ್ತಪಡಿಸಿದ್ದಾರೆ.

ಬಿಜೆಪಿ  ಶಾಸಕರಾದ ರಾಜುಗೌಡ, ಎಂಪಿ ರೇಣುಕಾಚಾರ್ಯ ಪರಣ್ಣಮನಹಳ್ಳಿ ಸೇರಿ ಹಲವರು ಸಿಪಿ ಯೋಗೇಶ್ವರ್ ಗೆ ಸಚಿವ ಸ್ಥಾನ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದು ಈ ಕುರಿತು ಸಭೆ ನಡೆಸಿ ಚರ್ಚಿಸಿದ್ದರು. ಇದೀಗ ಶಾಸಕ ಎಂಪಿ ರೇಣುಕಾಚಾರ್ಯ ಟ್ವಿಟ್ ಮಾಡಿ ಸೋತವರಿಗೆ ಸಚಿವ ಸ್ಥಾನ ನೀಡುತ್ತಾ ಹೋದ್ರೆ ಪಕ್ಷಕ್ಕೆ ಮುಜುಗರವಾಗುತ್ತೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಎಂಪಿ ರೇಣುಕಾಚಾರ್ಯ, ಸೋತವರಿಗೆ ಸಚಿವ ಸ್ಥಾನ ನೀಡಿದ್ರೆ ಪಕ್ಷಕ್ಕೆ ಮುಜುಗರ. ಪಕ್ಷ, ನಾಯಕತ್ವ ಮತ್ತು ಸರ್ಕಾರದ ವಿರುದ್ದ ಧ್ವನಿ ಎತ್ತಲ್ಲ. ಎತ್ತುವುದೂ ಇಲ್ಲ. ಮಧ್ಯಕರ್ನಾಟಕ, ಕರಾವಳಿ ಭಾಗ, ಕಲ್ಯಾಣ ಕರ್ನಾಟಕ ಭಾಗಕ್ಕೆ ಅವಕಾಶ ನೀಡಿ ಪ್ರಾದೇಶಿಕ ಸಮತೋಲನ ಕಾಪಾಡಬೇಕು ಎಂದು ಮನವಿ ಮಾಡಿದ್ದಾರೆ.

Key words: ministerial position – losers-MP Renukacharya- tweet