ಸಂಪುಟಕ್ಕೆ ಎಷ್ಟು ಜನ ಸೇರ್ಪಡೆಯಾಗ್ತಾರೆ ಎಂಬುದು ಸಂಜೆ ಗೊತ್ತಾಗುತ್ತೆ-ಸಿಎಂ ಬಿಎಸ್ ಯಡಿಯೂರಪ್ಪ ಹೇಳಿಕೆ…

ಕಲಬುರಗಿ,ಫೆ,5,2020(www.justkannada.in): ನಾಳೆ ರಾಜ್ಯಸಚಿವ ಸಂಪುಟ ವಿಸ್ತರಣೆಯಾಗಲಿದ್ದು ಈ ಸಂಬಂಧ ಪ್ರತಿಕ್ರಿಯಿಸಿರುವ ಸಿಎಂ ಬಿಎಸ್ ಯಡಿಯೂರಪ್ಪ, ಸಂಪುಟಕ್ಕೆ ಎಷ್ಟುಜನ ಸೇರ್ಪಡೆಯಾಗುತ್ತಾರೆ ಎಂಬುದು ಸಂಜೆ ಗೊತ್ತಾಗಲಿದೆ ಎಂದು ತಿಳಿಸಿದ್ದಾರೆ.

ಕಲಬುರಗಿ ವಿಮಾನ ನಿಲ್ದಾಣದಲ್ಲಿ ಇಂದು ಮಾತನಾಡಿದ ಸಿಎಂ ಬಿಎಸ್  ಯಡಿಯೂರಪ್ಪ, ನಾಳೆ ಗುರುವಾರ ಸಚಿವ ಸಂಪುಟ ವಿಸ್ತರಣೆ ಆಗುತ್ತೆ. ಸಂಪುಟಕ್ಕೆ ಎಷ್ಟು ಜನ ಸೇರ್ತಾರೆ ಅನ್ನೋದು ಸಂಜೆ ಗೊತ್ತಾಗುತ್ತದೆ. ಸಂಜೆ ಹೈ ಕಮಾಂಡ್ ನಿಂದ ಮಾಹಿತಿ ಬಂದ ಮೇಲೆ ಗೊತ್ತಾಗುತ್ತದೆ. ಎಷ್ಟು ಜನ ಸೇರ್ತಾರೆ ಏನು ಎಂಬುದನ್ನ ಹೈಕಮಾಂಡ್ ನಿರ್ಧರಿಸುತ್ತೆ ಎಂದು ಸ್ಪಷ್ಟನೆ ನೀಡಿದರು.

ಬಜೆಟ್ ಮಂಡನೆ ಕುರಿತು ಪ್ರತಿಕ್ರಿಯಿಸಿದ ಸಿಎಂ ಬಿಎಸ್ ವೈ, ಮಾರ್ಚ್ ಐದುರಂದು ಬಜೆಟ್ ಮಂಡನೆ ಮಾಡುತ್ತಿದ್ದೇವೆ. ರೈತರಿಗೆ, ಮಹಿಳೆಯರಿಗೆ ಅನುಕೂಲ ಆಗುವ ಬಜೇಟ್ ಮಂಡನೆ. ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ಕೊಡಲಾಗುವುದು ಎಂದು ಹೇಳಿದರು.

Key words: evening –clearify-minister position- CM BS Yeddyurappa-kalburgi