ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳಿಂದ ಪುಟ್ ಪಾತ್ ಅಂಗಡಿಗಳ ತೆರವು ಕಾರ್ಯಾಚರಣೆ…

ಮೈಸೂರು,ಫೆ,5,2020(www.justkannada.in): ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದ ಹಿನ್ನೆಲೆ,  ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳಿಂದ  ಪುಟ್ ಪಾತ್ ಅಂಗಂಡಿಗಳ ತೆರವು ಕಾರ್ಯಚರಣೆ ನಡೆಯಿತು.

ನಗರದ ನಂಜುಮಳಿಗೆ ಸರ್ಕಲ್ ಬಳಿ ಪುಟ್ ಪಾತ್ ಅಂಗಡಿಗಳನ್ನ ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು ತೆರವುಗೊಳಿಸಿದರು.  ಪಾಲಿಕೆ ಡೆವಲಪ್ಮೆಂಟ್ ಆಫೀಸರ್ ನಂಜುಂಡಯ್ಯ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಬಿದಿರಿನ ಅಂಗಡಿ, ಕೋಳಿ ಅಂಗಡಿ, ಮಡಿಕೆ ಅಂಗಡಿ ಮುಂತಾದ ಅಂಗಡಿಗಳನ್ನ ತೆರವುಗೊಳಿಸಲಾಯಿತು.

ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ಪುಟ್ಪಾತ್ ಅಂಗಂಡಿಗಳನ್ನ ತೆರವುಗೊಳಿಸಲಾಗಿದ್ದು ಅಂಗಡಿ ತೆರವಿನ ಬಗ್ಗೆ ನೆನ್ನೆಯೇ ವ್ಯಾಪಾರಿಗಳಿಗೆ ಮೈಸೂರು ಮಹಾನಗರ ಪಾಲಿಕೆ ಸೂಚನೆ ನೀಡಿತ್ತು. ಇನ್ನು ಮತ್ತೊಮ್ಮೆ ಪುಟ್ ಪಾತ್ ನಲ್ಲಿ ಅಂಗಡಿ ತೆರೆದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಪಾಲಿಕೆ ಅಧಿಕಾರಿಗಳು ಎಚ್ಚರಿಕ ನೀಡಿದ್ದಾರೆ.

Key words: Clearing operation – putpath-shops – Mysore city corporation