ವಿಧಾನ ಪರಿಷತ್ ಚುನಾವಣೆ: ಇಂದು ಡಿಸಿಎಂ ಲಕ್ಷ್ಮಣ್ ಸವದಿ ನಾಮಪತ್ರ….

ಬೆಂಗಳೂರು,ಫೆ,5,2020(www.justkannada.in) ವಿಧಾನಪರಿಷತ್ ಒಂದು ಸ್ಥಾನಕ್ಕೆ ಚುನಾವಣೆ ಹಿನ್ನೆಲೆ  ಇಂದು ಡಿಸಿಎಂ ಲಕ್ಷ್ಮಣ್ ಸವದಿ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.

ಶಾಸಕ ರಿಜ್ವಾನ್ ಅರ್ಷಾದ್ ರಿಂದ ತೆರವಾಗಿರುವ ವಿದಾನಪರಿಷತ್ ನ ಒಂದು ಸ್ಥಾನಕ್ಕೆ  ಫೆಬ್ರವರಿ 17 ರಂದು ಚುನಾವಣೆ ನಡೆಯಲಿದೆ. ನಾಮಪತ್ರ ಸಲ್ಲಿಸಲು‌ ಗುರುವಾರ ಕಡೆಯ ದಿನಾಂಕವಾಗಿದ್ದು ಹೀಗಾಗಿ  ಇಂದೆ ನಾಮಪತ್ರ ಸಲ್ಲಿಸಲು ಡಿಸಿಎಂ ಲಕ್ಷ್ಮಣ್ ಸವದಿ ನಿರ್ಧಾರ ಮಾಡಿದ್ದಾರೆ. ಮುಖಂಡರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.

ಶುಕ್ರವಾರ ನಾಮಪತ್ರ ಪರಿಶೀಲನೆ ಕಾರ್ಯ ನಡೆಯಲಿದ್ದು, ಸೋಮವಾರ ನಾಮಪತ್ರ ಹಿಂಪಡೆಯಲು ಕಡೆಯ ದಿನಾಂಕವಾಗಿದೆ. ಬಿಜೆಪಿ 117 +1 ಬಲ ಹೊಂದಿದ್ದು  ಹೀಗಾಗಿ ಡಿಸಿಎಂ ಲಕ್ಷ್ಮಣ್ ಸವದಿ ಗೆಲುವು ಬಹುತೇಕ ಖಚಿತವಾಗಿದೆ.

ಇನ್ನು ಕಾಂಗ್ರೆಸ್ 65ಜೆಡಿಎಸ್ 35 ಸಂಖ್ಯಾ ಬಲ ಹೊಂದಿದೆ. ಎರಡೂ ಪಕ್ಷ ಮೈತ್ರಿ ಮಾಡಿಕೊಂಡರು ಬೇರೆ ಅಭ್ಯರ್ಥಿ ಗೆಲುವು ಅಸಾಧ್ಯವಾಗಿದೆ. ಈಗಾಗಲೇ ಪರಿಷತ್ ಚುನಾವಣೆಗೆ ಅಭ್ಯರ್ಥಿ ಹಾಕುವುದಿಲ್ಲವೆಂದು ಕಾಂಗ್ರೆಸ್ ಘೋಷಣೆ ಮಾಡಿದೆ.

Key words: Legislative Council-Today DCM -Laxman Sawadi – nomination -file