ಅಂಡು ಬಗ್ಗಿಸಿಕೊಂಡು ಕನ್ನಡ ಸಿನಿಮಾ ನೋಡಿ! ದರ್ಶನ್ ಹೇಳಿಕೆಗೆ ಹೌದೌದು ಎಂದ ಅಭಿಮಾನಿಗಳು, ಈಗೆಲ್ಲ ಮಾತಾಡ್ಬೇಡಿ ಎಂದ ಕೆಲವರು!

 

ಬೆಂಗಳೂರು, ಫೆಬ್ರವರಿ 05, 2019 (www.justkannada.in): ಕನ್ನಡದಲ್ಲಿಯೂ ಒಳ್ಳೆಯ ಸಿನಿಮಾಗಳು ನಿರ್ಮಾಣವಾಗುತ್ತಿವೆ. ಕನ್ನಡಿಗರು ಅಂಡು ಬಗ್ಗಿಸಿಕೊಂಡು ಈ ಸಿನಿಮಾಗಳನ್ನು ನೋಡಿದಾಗಲಷ್ಟೇ ಕನ್ನಡ ಚಿತ್ರರಂಗದ ಉಳಿವು ಸಾಧ್ಯ ಎಂದಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿಕೆ ಪರ ವಿರೋಧ ಚರ್ಚೆಗೆ ಕಾರಣವಾಗಿದೆ.

ನಟ ದೇವರಾಜ್ ಪುತ್ರ ಪ್ರಜ್ವಲ್ ದೇವರಾಜ್ ಅಭಿನಯದ ‘ ಜಂಟಲ್ ಮನ್ ‘ ಸಿನಿಮಾ ಈ ವಾರ ಬಿಡುಗಡೆಗೆ ಸಿದ್ದವಾಗಿದೆ. ಈ ಸಂಬಂಧ ಸಿನಿಮಾದ ಪ್ರೀಮಿಯರ್ ಶೋ ವೀಕ್ಷಣೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಗಮಿಸಿದ್ದರು. ಸಿನಿಮಾ ವೀಕ್ಷಿಸಿದ ಬಳಿಕಬಳಿಕ ವೇದಿಕೆಗೆ ಆಗಮಿಸಿದ ನಟ ದರ್ಶನ್ ಹೇಳಿದ ಮಾತು ಇದೀಗ ಚರ್ಚೆಗೆ ನಾಂದಿಯಾಡಿದೆ.

ಬಹುತೇಕ ಹೊಸಬರ ಸಿನಿಮಾಗಳ ಟೀಸರ್, ಆಡಿಯೋ ಬಿಡುಗಡೆಗೆ ಹೋಗಿ ಶುಭ ಹಾರೈಸುತ್ತೇವೆ. ಆದ್ರೆ ಇನ್ಮುಂದೆ ನಾನು ಈ ರೀತಿ ಮಾಡಲ್ಲ. ಯಾಕಂದ್ರೆ, ಹೊಸಬರ ಸಿನಿಮಾವನ್ನು ನೋಡಿ ಪ್ರೋತ್ಸಾಹಿಸಬೇಕಾದದ್ದು ಪ್ರೇಕ್ಷಕರ ಕರ್ತವ್ಯ. ಅವ್ರೇ ಸಹಕಾರ ನೀಡದಿದ್ರೆ ಹೇಗೆ..? ಎಂದ ಪ್ರಶ್ನಿಸಿದರು.

ಮುಂದುವರೆದು, ಪರಭಾಷೆಯ ಸಿನಿಮಾಗಳಿಗಷ್ಟೇ ಪ್ರೋತ್ಸಾಹ ಕೊಡಬೇಡಿ. ಕನ್ನಡ ಸಿನಿಮಾಗಳನ್ನು ನೋಡಿ ಪ್ರೋತ್ಸಾಹಿಸಬೇಕು. ಸಂಚಾರಿ  ವಿಜಯ್ ಅಭಿನಯದ ‘ ನಾ ಅವನಲ್ಲ, ಅವಳು..’ ಸಿನಿಮಾ ನೋಡಿ ಅವರ ಫಿದಾ ಆಗ್ಬಿಟ್ಟೆ. ಸಂಚಾರಿ ವಿಜಯ್ ಗಿಂತ ಪರಭಾಷೆಯಲ್ಲಿ ಯಾವ ದೊಡ್ಡ ನಟನೂ ಇಲ್ಲ. ಆದ್ರೆ ಅವರ ಹೆಸರಿನ ಮುಂದೆ ಉದ್ದೂದ್ಧ ಬಿಲ್ಡಪ್ ಇರುತ್ತದೆ ಅಷ್ಟೆ. ತೆಲುಗು, ತಮಿಳಿನಲ್ಲಿ ಎಂಥೆಥ್ಥ ದೊಡ್ಡ ಸಿನಿಮಾ ಮಾಡುತ್ತಾರೆಂದು  ನನಗೂ ಹಲವು‌ ಜನರು ಹೇಳುತ್ತಾರೆ. ಇಂಥವ್ರಿಗೆ ನಾನು ಹೇಳುವುದು ಇಷ್ಟೆ, ಅಂಡ್ ಬಗ್ಗಿಸಿಕೊಂಡು ಕನ್ನಡ ಸಿನಿಮಾ ನೋಡಿ ಮೊದಲು ಅಂಥ. ನಮ್ಮವರಿಗೆ ಬೆನ್ನುತಟ್ಟುವ‌ ಕೆಲಸ ಮಾಡುವ ತನಕ ನಾವು ಉದ್ಧಾರ ಆಗುವುದಿಲ್ಲ ಎಂದು ದರ್ಶನ್ ಹೇಳಿದಾಗ ವೇದಿಕೆಯಲ್ಲಿದ್ದವರು ಹಾಗೂ ಸಭಾಂಗಣದಲ್ಲಿದ್ದವರಿಂದ ಜೋರು ಚಪ್ಪಾಳೆ.

ನಟ ದರ್ಶನ್ ಅವರ ಈ ಹೇಳಿಕೆಗೆ ಅವರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿ ಹೌದೌದು ಎಂದಿದ್ದರೆ,  ಇನ್ನು ಕೆಲವರು ಒಳ್ಳೇ ಸಿನಿಮಾ ಮಾಡಿ ಅದನ್ನು ಬಿಟ್ಟು ಬಾಯಿಗೆ ಬಂದ್ದಂತೆ ಮಾತನಾಡಬೇಡಿ ಎಂದು ಹೇಳಿದ್ದಾರೆ. ಒಟ್ಟಾರೆ ದರ್ಶನ್ ಹೇಳಿಕೆ ಈಗ ಸಿನಿ ಪ್ರೇಮಿಗಳ ನಡುವಿನ ಬಿಸಿಬಿಸಿ ಚರ್ಚೆಗೆ ಗ್ರಾಸವಾಗಿರುವುದಂತೂ ಸುಳ್ಳಲ್ಲ….

key words : challenging-star-darshan-statment-goes-viral-kannada-film-gentleman