ಸಚಿವ ಸ್ಥಾನದ ಬಗ್ಗೆ ಬಹಳ ಆಸೆ ಇಟ್ಟುಕೊಂಡಿಲ್ಲ -ಪರಿಷತ್ ಸದಸ್ಯ ಸಿ.ಪಿ ಯೋಗೇಶ್ವರ್…

ಚನ್ನಪಟ್ಟಣ,ಆ,24,2020(www.justkannada.in): ನನ್ನನ್ನ ಎಂಎಲ್ ಸಿ ಮಾಡಿದ್ದಕ್ಕೆ ತೃಪ್ತಿ ಇದೆ. ನಾನು ಸಚಿವ ಸ್ಥಾನದ ಬಗ್ಗೆ ಬಹಳ ಆಸೆ ಇಟ್ಟುಕೊಂಡಿಲ್ಲ ಎಂದು ಪರಿಷತ್ ಸದಸ್ಯ ಸಿ.ಪಿ ಯೋಗೇಶ್ವರ್ ನುಡಿದರು.jk-logo-justkannada-logo

ಚೆನ್ನಪಟ್ಟಣದಲ್ಲಿ ಇಂದು ಮಾತನಾಡಿದ ಸಿ.ಪಿ ಯೋಗೇಶ್ವರ್, ನನಗೆ ಸಚಿವ ಸ್ಥಾನ ನೀಡುವ ವಿಚಾರ ಪಕ್ಷದ ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟಿದ್ದು . ಸಚಿವ ಸ್ಥಾನ ನೀಡುವುದು ಬಿಡುವುದರ ಬಗ್ಗೆ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ. ನಾನು ಸಚಿವ ಸ್ಥಾನದ ಬಗ್ಗೆ ಬಹಳ ಆಸೆ ಇಟ್ಟುಕೊಂಡಿಲ್ಲ ಎಂದರು.ministerial-position-lgislative-council-member-cp-yogeshwar

ಹಾಗೆಯೇ ನನ್ನನ್ನ ಎಂಎಲ್ ಸಿ ಮಾಡಿದ್ದಕ್ಕೆ ಧನ್ಯವಾದ ಅರ್ಪಿಸಲು ದೆಹಲಿಗೆ ಹೋಗಿದ್ದೆ. ಇನ್ನು ಮೂರು ವರ್ಷ ಬಿ.ಎಸ್ ಯಡಿಯೂರಪ್ಪ ಅವರೇ ಸಿಎಂ ಆಗಿರುತ್ತಾರೆ ಎಂದು ಸಿ.ಪಿ ಯೋಗೇಶ್ವರ್ ತಿಳಿಸಿದರು.

Key words: ministerial position-Lgislative Council –Member- CP Yogeshwar.