ಫೋನ್ ಕದ್ಧಾಲಿಕೆ ಆರೋಪ: ಡಿ.ಕೆ ಶಿವಕುಮಾರ್ ಗೆ ತಿರುಗೇಟು ಕೊಟ್ಟ ಡಿಸಿಎಂ ಲಕ್ಷ್ಮಣ್ ಸವದಿ….

ಬೆಂಗಳೂರು,ಆ,24,2020(www.justkannada.in):  ನನ್ನ ಫೋನ್ ಕದ್ಧಾಲಿಕೆ ಮಾಡಲಾಗುತ್ತಿದೆ ಎಂದು ಆರೋಪ ಮಾಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗೆ ಡಿಸಿಎಂ ಲಕ್ಷ್ಮಣ್ ಸವದಿ ತಿರುಗೇಟು ನೀಡಿದ್ದಾರೆ.jk-logo-justkannada-logo

ಡಿ.ಕೆ ಶಿವಕುಮಾರ್ ಸುಳ್ಳು ಆರೋಪ ಮಾಡುತ್ತಿದ್ದಾರೆ. ಡಿ.ಜೆ ಹಳ್ಳಿ, ಕೆ.ಸಿಹಳ್ಳಿ ಗಲಭೆ ಪ್ರಕರಣದ ಗಮನ ಬೇರೆಡೆ ಸೆಳೆಯಲು ಈ ರೀತಿ ಆರೋಪ ಮಾಡಿದ್ದಾರೆ ಎಂದು ಲಕ್ಷ್ಮಣ್ ಸವದಿ ಚಾಟಿ ಬೀಸಿದ್ದಾರೆ.phone-tapping-dcm-lakshman-savdi-kpcc-prsident-dk-sivakumar

ಈ ಕುರಿತು ಇಂದು ಮಾತನಾಡಿದ ಡಿಸಿಎಂ ಲಕ್ಷ್ಮಣ್ ಸವದಿ,  ಫೋನ್ ಕದ್ದಾಲಿಕೆ ಕುರಿತು ಡಿ.ಕೆ ಶಿವಕುಮಾರ್ ಮಾಡುತ್ತಿರುವ ಆರೋಪವೆಲ್ಲಾ ಸುಳ್ಳು.  ತಮ್ಮ ಪಕ್ಷದ ಆರೋಪ ಮರೆ ಮಾಚುವ ಪ್ರಯತ್ನ ಮಾಡುತ್ತಿದ್ದಾರೆ. ಪೊಲೀಸ್ ಕಮಿಷನರ್ ಗೆ ಡಿ.ಕೆ ಶಿವಕುಮಾರ್ ಧಮ್ಕಿ ಹಾಕಿದ್ದಾರೆ. ಇಂತಹ ಗೊಡ್ಡು ಬೆದರಿಕೆಗಳಿಗೆ ಸರ್ಕಾರ ಹೆದರುವುದಿಲ್ಲ ಎಂದು ಟಾಂಗ್ ನೀಡಿದರು.

Key words:  phone tapping-DCM Lakshman Savdi-  kpcc-prsident-DK Sivakumar.