ನಂಜನಗೂಡು ಪ್ರಬಾರ ಟಿಎಚ್ಒ ಆಗಿ ಈಶ್ವರ್ ನೇಮಕ

ಮೈಸೂರು, ಆಗಸ್ಟ್, 24, 2020(www.justkannada.in) ; ನಂಜನಗೂಡು ಟಿಎಚ್ಒ ನಾಗೇಂದ್ರ ಆತ್ಮಹತ್ಯೆ ಹಿನ್ನೆಲೆಯಲ್ಲಿ ತೆರವಾದ ಆ ಜಾಗಕ್ಕೆ ಪ್ರಬಾರ ಟಿಎಚ್ಒ ಆಗಿ ಈಶ್ವರ್ ಅವರನ್ನು ನೇಮಿಸಲಾಗಿದೆ.

jk-logo-justkannada-logo

ನಾಗೇಂದ್ರ ಆತ್ಮಹತ್ಯೆ ಹಿನ್ನೆಲೆಯಲ್ಲಿ ತೆರವಾದ ಜಾಗಕ್ಕೆ ಮೂಗೂರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಈಶ್ವರ್ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಕಳೆದ ನಾಲ್ಕೈದು ದಿನಗಳ ಹಿಂದೆ ನಂಜನಗೂಡು ತಾಲ್ಲೂಕು ಆರೋಗ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ನಾಗೇಂದ್ರ ಅವರು ಮನೆಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದರು.ishwar-appointed-nanjangud-tho

ಈ ನಡುವೆ ಇವರ ಸಾವಿಗೆ ಮೇಲಾಧಿಕಾರಿಗಳ ಕಿರುಕುಳ ಕಾರಣ ಎಂಬ ಆರೋಪ ಕೇಳಿ ಬಂದಿತ್ತು. ಮೈಸೂರು ಜಿ.ಪಂ ಸಿಇಒ ಅವರನ್ನ ವರ್ಗಾವಣೆ ಮಾಡುವಂತೆ ವೈದ್ಯರು ಮುಷ್ಕರ ನಡೆಸಿದ್ದರು.

 

Key words ; Ishwar-appointed-Nanjangud-THO