ಕಾಂಗ್ರೆಸ್ ಅನ್ನ ಮುಳುಗುವ ಹಡಗಿಗೆ ಹೋಲಿಸಿದ ಸಚಿವ ವಿ.ಸೋಮಣ್ಣ…

ಮಡಿಕೇರಿ,ಡಿಸೆಂಬರ್,17,2020(www.justkannada.in):  ಹೊಸಕೊಟೆ ಉಪಚುನಾವಣೆ ವೇಳೆ ಬಿಜೆಪಿ ವಿರುದ್ಧ ಬಂಡಾಯವೆದ್ಧು ಪಕ್ಷೇತರರಾಗಿ ಸ್ಪರ್ಧಿಸಿ ಗೆಲುವು ಸಾಧಿಸಿ ಶಾಸಕರಾಗಿರುವ ಶರತ್ ಬಚ್ಚೇಗೌಡ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆಯೇ ಎಂಬ  ಬಗ್ಗೆ ಚರ್ಚೆಯಾಗುತ್ತಿದೆ.Teachers,solve,problems,Government,bound,Minister,R.Ashok

ಈ ಮಧ್ಯೆ ಈ ಕುರಿತು ಮಡಿಕೇರಿಯಲ್ಲಿ ಪ್ರತಿಕ್ರಿಯಿಸಿರುವ ವಸತಿ ಸಚಿವ ವಿ.ಸೋಮಣ್ಣ, ಕಾಂಗ್ರೆಸ್ ಅನ್ನ ಮುಳುಗುವ ಹಡಗಿಗೆ ಹೋಲಿಕೆ ಮಾಡಿದ್ದಾರೆ.  ಶರತ್ ಬಚ್ಚೇಗೌಡರು ಕಾಂಗ್ರೆಸ್ ಸೇರ್ಪಡೆ ವಿಚಾರ ಅದು ಅವರ ವೈಯಕ್ತಿಕ ವಿಚಾರ. ಮುಳುಗುವ ಹಡಗಿಗೆ ಹೋಗ್ತೇನೆ ಎಂದರೇ ಹೋಗಲಿ ಬಿಡಿ ಎಂದು ಟೀಕಿಸಿದ್ದಾರೆ.

minister-v-somanna-compared-sinking-ship-congress
ಕೃಪೆ: internet

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರನ್ನ ಶಾಸಕ ಶರತ್ ಬಚ್ಚೇಗೌಡ ಭೇಟಿಯಾಗಿ ಚರ್ಚಿಸಿದ್ದರು. ಈ ಬಗ್ಗೆ ಡಿ.ಕೆ ಶಿವಕುಮಾರ್ ಪ್ರತಿಕ್ರಿಯಿಸಿ, ಶರತ್ ಬಚ್ಚೇಗೌಡ ಗ್ರಾಮಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಬೆಂಬಲಿಸುತ್ತಾರೆ ಎಂದು ಹೇಳಿಕೆ ನೀಡಿದ್ದರು.

Key words: Minister -V. Somanna- compared – sinking ship – Congress.