Sunday, August 16, 2026

BDA Apartments

Home Front Page ಅರಮನೆ ಆವರಣದಲ್ಲಿಮಾವುತರ ಮಕ್ಕಳೊಂದಿಗೆ ಆಟವಾಡಿದ ಸಚಿವ ಸೋಮಶೇಖರ್

ಅರಮನೆ ಆವರಣದಲ್ಲಿಮಾವುತರ ಮಕ್ಕಳೊಂದಿಗೆ ಆಟವಾಡಿದ ಸಚಿವ ಸೋಮಶೇಖರ್

ಮೈಸೂರು, ಸೆಪ್ಟೆಂಬರ್ 18, 2022 (www.justkannada.in): ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಆಗಮಿಸಿರುವ ಗಜಪಡೆಯ ನಿರ್ವಹಣೆಯ ಜವಬ್ದಾರಿಯನ್ನು ನಿರ್ವಹಿಸುತ್ತಿರುವ ಮಾವುತ ಮತ್ತು ಕಾವಾಡಿಗರ ಯೋಗಕ್ಷೇಮ ವಿಚಾರಿಸಿ, ಅವರಿಗೆ ತಿಂಡಿ ಬಡಿಸಿದರು.

ಇಂದು ಅರಮನೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾವಾಡಿ ಹಾಗೂ ಮಾವುತರಿಗೆ ಉಪಹಾರ ಬಡಿಸಿದರು. ಜತೆಗೆ ಅವರ ಮಕ್ಕಳೊಂದಿಗೆ ಆಟವಾಡಿ ಸಂತಸಪಟ್ಟರು.

ಮಾವುತ ಮತ್ತು ಕಾವಾಡಿಗರ ಮಕ್ಕಳಿಗೆ ಆಟದ ಸಾಮಾಗ್ರಿಗಳನ್ನು ವಿತರಣೆ ಮಾಡಿದರು. ಇದೇ ವೇಳೆ ಅರಮನೆ ಆವರಣದಲ್ಲಿ ತೆರೆಯಲಾಗಿರುವ ತಾತ್ಕಾಲಿಕ ಆರೋಗ್ಯ ತಪಾಸಣೆ ಕೇಂದ್ರ ವೀಕ್ಷಿಸಿದರು. ಈ ಸಂದರ್ಭದಲ್ಲಿ ಸಚಿವರು ಬಿಪಿ ತಪಾಸಣೆ ಮಾಡಿಸಿಕೊಂಡರು.