ಬೆಂಗಳೂರು,ನವೆಂಬರ್,4,2026 (www.justkannada.in): ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿಯೇ ಸ್ಟಿಂಗ್ ಮಾಡಿಸಿದ್ದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ ತಂಗಡಗಿ ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ಮಾತನಾಡಿದ ಸಚಿವ ಶಿವರಾಜ್ ತಂಗಡಗಿ, ಕಾಂಗ್ರೆಸ್ಸಿಗರೇ ಸ್ಟಿಂಗ್ ಮಾಡಿದ್ದರೆಂದು ಹೆಚ್ ಡಿ ಕುಮಾರಸ್ವಾಮಿ ಹೇಳುತ್ತಿದ್ದಾರೆ. ಸ್ಟಿಂಗ್ ಮಾಡಿದ ಇಬ್ಬರನ್ನು ಆಫೀಸ್ ನಲ್ಲಿಇಟ್ಟುಕೊಂಡಿದ್ದಾರೆ ಇಬ್ಬರನ್ನು ಕಚೇರಿಯಲ್ಲಿ ಇಟ್ಟುಕೊಂಡು ಪ್ರಚಾರ ಮಾಡಿದ್ದು ಹೆಚ್ ಡಿಕೆ. ಕುಮಾರಸ್ವಾಮಿ ನಮ್ಮ ನಡುವೆ ಜಗಳ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಸಿಎಂ ಮಾಜಿ ಸಿಎಂ ನಡುವೆ ಜಗಳ ತರಲು ಪ್ರಯತ್ನಿಸುತ್ತಿದ್ದಾರೆ. ಹೆಚ್ ಡಿಕೆಗೆ ಸರಿಯಾದ ಸಮಯಕ್ಕೆ ಉತ್ತರ ಕೊಡುತ್ತೇವೆ ಎಂದರು.
ಮಲ್ಲಿಕಾರ್ಜುನ ಖರ್ಗೆ ಪ್ರಿಯಾಂಕ್ ವಿರುದ್ದ ಏಕವಚನದಲ್ಲಿ ಮಾತನಾಡುತ್ತಾರೆ ಎದುರಗಡೆ ಸಿದ್ದರಾಮಯ್ಯ ಪರ ಮಾತನಾಡುವುದು. ಮತ್ತೊಂದೆಡೆ ಸೋಷಿಯಲ್ ಮಿಡಿಯಾ ಮೂಲಕ ಸ್ಟಿಂಗ್ ಮಾಡಿಸುವುದು. ಒಕ್ಕಲಿಗ ಸಮುದಾಯದ ಡಿಕೆಶಿ ಸಿಎಂ ಆಗಿದ್ದಕ್ಕೆ ಹೆಚ್ ಡಿಕೆಗೆ ಸಹಿಸಿಕೊಳ್ಳಲಾಗುತ್ತಿಲ್ಲ ಎಂದು ಸಚಿವ ಶಿವರಾಜ್ ತಂಗಡಗಿ ವಾಗ್ದಾಳಿ ನಡೆಸಿದರು.
Union Minister, H. D. Kumaraswamy, sting operation, Minister, Shivaraj Tangadagi






