Wednesday, August 19, 2026

BDA Apartments

Home Front Page ಇಡೀ ದೇಶವನ್ನೇ ಮುಳುಗಿಸಿ ಬಿಟ್ಟಲ್ರಿ- ಮೋದಿ ವಿರುದ್ದ ಸಚಿವ ಸಂತೋಷ್ ಲಾಡ್ ಕಿಡಿ

ಇಡೀ ದೇಶವನ್ನೇ ಮುಳುಗಿಸಿ ಬಿಟ್ಟಲ್ರಿ- ಮೋದಿ ವಿರುದ್ದ ಸಚಿವ ಸಂತೋಷ್ ಲಾಡ್ ಕಿಡಿ

ಬೆಂಗಳೂರು,ಮೇ,20,2026 (www.justkannada.in): ಪಾಕಿಸ್ತಾನಕ್ಕಿಂತ ಕೆಟ್ಟ ಪರಿಸ್ಥಿತಿಯಲ್ಲಿ ಭಾರತದ ಕರೆನ್ಸಿ ಇದೆ. ಇಡೀ ದೇಶವನ್ನೇ ಮುಳುಗಿಸಿ ಬಿಟ್ಟರಲ್ಲ ಎಂದು ಪ್ರಧಾನಿ ಮೋದಿ ವಿರುದ್ದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಗುಡುಗಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಸಂತೋಷ್ ಲಾಡ್, ಬಿಜೆಪಿ, ಮೋದಿ ಸರಕಾರದಿಂದ ದೇಶ ಸತ್ತು ಹೋಗಿದೆ. ಬಿಜೆಪಿಯವರು ದೇಶದ ಸಾಲದ ಬಗ್ಗೆ ಚರ್ಚೆ ಮಾಡುತ್ತಾರಾ?  ಮೋದಿ ಮಿತವ್ಯಯ ಮಾಡಿ ಅಂತಾ ಹೇಳಿದ್ದಾರಲ್ಲ. ಹಿಂದೆ ಆರ್ಭಟದ ಭಾಷಣ  ಮಾಡುತ್ತಿದ್ದರು. ಈಗ ಯಾಕೆ ಹೀಗೆ ಹೇಳುತ್ತಿದ್ದಾರೆ. ಪಾಕಿಸ್ತಾನಕ್ಕಿಂತ ಕೆಟ್ಟ ಪರಿಸ್ಥಿತಿಯಲ್ಲಿ ಭಾರತದ ಕರೆನ್ಸಿ ಇದೆ. ದೇಶವನ್ನ ಮುಳುಗಿಸಿ ಬಿಟ್ಟಲ್ರಿ ಒಂದೇ ಒಂದು  ಪಬ್ಲಿಕ್ ಸೆಕ್ಟರ್ ಕಂಪನಿ ಉಳಿಸಿಲ್ಲ. ಮೋದಿ ಗ್ರೇಟ್,  ಮೋದಿ ಗ್ರೇಟ್, ಮೋದಿ ಗ್ರೇಟ್,  ಅನ್ನಬೇಕಷ್ಟೆ ಎಂದರು.

ಕಾಂಗ್ರೆಸ್ ನಿಂದ ಸಾಧನ ಸಮಾವೇಶ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಸಂತೋಷ್ ಲಾಡ್,   3 ವರ್ಷದಲ್ಲಿ ನಾವು ಹಲವು ವಿಷಯಗಳಲ್ಲಿ ಮುಂದೆ ಇದ್ದೇವೆ. ಗ್ಯಾರಂಟಿ ಯೋಜನೆಗಳ ಬಗ್ಗೆ ಹಲವರು ತಪ್ಪಾಗಿ ಗ್ರಹಿಸಿದ್ದಾರೆ.  ಗ್ಯಾರಂಟಿ ಯೋಜನೆಯಿಂದ ತಲಾದಾಯ ಹೆಚ್ಚಾಗಿದೆ. ಪ್ರತಿಮನೆಗೂ 8ರಿಂದ 10 ಸಾವಿರ ಹೋಗುತ್ತಿದೆ. ಇದು ಸ್ಟೆಂಡಿಂಗ್ ಎಕಾನಮಿ ಸೇವಿಂಗ್ ಎಕಾನಮಿ ಅಲ್ಲ. 60 ಸಾವಿರ ಕೋಟಿ ರೂ ಮತ್ತೆ ವಾಪಸ್ ಮಾರುಕಟ್ಟೆಗೆ ಬರುತ್ತಿದೆ. ನಮ್ಮ ಯೋಜನೆಗಳು ಜನರಿಗೆ ಉಪಯೋಗ ಆಗುತ್ತಿದೆ ಎಂದರು.

Key words: India, currency, worse, condition, Minister, Santosh Lad