Tuesday, September 15, 2026

BDA Apartments

Home Front Page ತಮಿಳುನಾಡಿಗೆ ಕದ್ದುಮುಚ್ಚಿ ನೀರು: ಬಿಜೆಪಿ ಆರೋಪಕ್ಕೆ ಸಚಿವ ಚಲುವರಾಯಸ್ವಾಮಿ ತಿರುಗೇಟು

ತಮಿಳುನಾಡಿಗೆ ಕದ್ದುಮುಚ್ಚಿ ನೀರು: ಬಿಜೆಪಿ ಆರೋಪಕ್ಕೆ ಸಚಿವ ಚಲುವರಾಯಸ್ವಾಮಿ ತಿರುಗೇಟು

ಮಂಡ್ಯ,ಆಗಸ್ಟ್,19,2026 (www.justkannada.in):  ಸರ್ಕಾರ ತಮಿಳುನಾಡಿಗೆ ಕದ್ದುಮುಚ್ಚಿ ನೀರು ಹರಿಸುತ್ತಿದೆ ಎಂದು ಆರೋಪಿಸಿದ ಬಿಜೆಪಿಗೆ ಜಲಸಂಪನ್ಮೂಲ ಸಚಿವ ಚಲುವರಾಯಸ್ವಾಮಿ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಚಲುವರಾಯಸ್ವಾಮಿ, ಬಿಜೆಪಿಯವರು ಹೇಳಲಿ ತೊಂದರೆ ಇಲ್ಲ. ಮಂಡ್ಯ ಕಾವೇರಿ ಅಚ್ಚುಕಟ್ಟು ನನ್ನದು. ಪರಿಸರ, ಪ್ರಕೃತಿ ಜೊತೆ ನಾವು ಆಟ ಆಡುವುದಕ್ಕೆ ಆಗುವುದಿಲ್ಲ.  ಗೊರೂರು ಹಾಗೂ ಕಬಿನಿಯಿಂದ ಜಮೀನಿಗೆ ನೀರು ಬಿಟ್ಟಿದ್ದೇವೆ. ಹಾರಂಗಿ ಜಲಾಶಯದಿಂದಲೂ ನೀರು ಬಿಡಲು ಹೇಳಿದ್ದೇನೆ ಎಂದರು.   ತಮಿಳುನಾಡಿಗೆ ಕದ್ದುಮುಚ್ಚಿ ನೀರು chaluvarayaswamy

ರೈತರ ರಕ್ಷಣೆ ಮಾಡೋದು ನಮ್ಮ ಜವಾಬ್ದಾರಿ.  ಸಿಡಬ್ಲ್ಯು ಎಂಎ, ಸಿಡಬ್ಲ್ಯುಆರ್ ಸಿ ಸಭೆ ಬಗ್ಗೆ ಲೀಗಲ್ ಟೀಮ್ ಜೊತೆ ಮಾತನಾಡಿದ್ದೇನೆ ಎಂದು ಸಚಿವ ಚಲುವರಾಯಸ್ವಾಮಿ ತಿಳಿಸಿದರು.ಬಿಜೆಪಿ ಆರೋಪಕ್ಕೆ ಸಚಿವ ಚಲುವರಾಯಸ್ವಾಮಿ ತಿರುಗೇಟು jk02_new jk02 new

Key words: Minister, Chaluvarayaswamy, BJP, water, Tamil Nadu