ಎಲ್ ಪಿಜಿ ಸಿಲಿಂಡರ್ ಗಾಗಿ ಜನರ ಪರದಾಟ: ವಿಶ್ವಗುರು ಉತ್ತರ ಕೊಡಬೇಕು- ಸಚಿವ ಸಂತೋಷ್ ಲಾಡ್

ದಾವಣಗೆರೆ,ಏಪ್ರಿಲ್,4,2026 (www.justkannada.in): ದೇಶಾದ್ಯಂತ ಎಲ್ ಪಿಸಿ ಸಿಲಿಂಡರ್ ಗಾಗಿ ಜನರು ಪರದಾಟ ನಡೆಸುತ್ತಿದ್ದಾರೆ. ಗ್ಯಾಸ್ ಸಿಲಿಂಡರ್ ಕೊರತೆ ಬಗ್ಗೆ ವಿಶ್ವಗುರು ಉತ್ತರ ಕೊಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಆಗ್ರಹಿಸಿದರು.

ಇಂದು ದಾವಣಗೆರೆಯಲ್ಲಿ ಮಾತನಾಡಿದ ಸಚಿವ ಸಂತೋಷ್ ಲಾಡ್,  ಬಿಜೆಪಿಯವರಿಗೆ  ಮುಸ್ಲೀಮರ ಬಗ್ಗೆ ಯಾಕೆ ಅನುಕಂಪ ಬಂದಿದೆ ಬಿಜೆಪಿಯಲ್ಲಿ ಎಷ್ಟು ಮುಸ್ಲೀಂ ಸಮುದಾಯದ ಸಂಸದರಿದ್ದಾರೆ. ಬಿಜೆಪಿ ಪಕ್ಷದವರಿಗೆ ಮಾನ ಮರ್ಯಾದೆ ಇಲ್ಲ ಎಂದು ಕೆಂಡಕಾರಿದರು.

ದೇಶಾದ್ಯಂತ ಎಲ್ ಪಿಜಿ  ಸಿಲಿಂಡರ್ ಸಿಗದೆ ಜನರು ಪರದಾಡುತ್ತಿದ್ದಾರೆ. ಇದಕ್ಕೆ ಕಾರಣ ಯಾರು ವಿಶ್ವಗುರು ಉತ್ತರ ಕೊಡಬೇಕು.  ರಷ್ಯದಿಂದ ರಿಯಾಯಿತಿ ದರದಲ್ಲಿ ತೈಲಖರೀದಿ ಮಾಡಲಾಗಿದೆ. ಅದರೆ ತೈಲಕಂಪನಿಗಳು ಅಂಬಾನಿ ಅದಾನಿ ಒಡೆತನದಲ್ಲಿವೆ.  ಅಂಬಾನಿ ಅದಾನಿ ಕಂಪನಿಗಳು ಸಾವಿರಾರು ಕೋಟಿ ಲಾಭ ಗಳಿಸಿವೆ ಪಾಪ ಜಾಸ್ತಿ ಆದಾಗ ದೇವರು ಕೃಷ್ಣನ ರೂಪದಲ್ಲಿ ಬಂದು ಸರಿ ಮಾಡುತ್ತಾನೆ ಬಿಜೆಪಿ ಪಾಪವೂ ಹೆಚ್ಚಾಗಿದೆ ಎಂದು ಸಚಿವ ಸಂತೋಷ್ ಲಾಡ್ ಲೇವಡಿ ಮಾಡಿದರು.

Key words:  People, LPG, cylinders, Vishwaguru, Minister, Santosh Lad