Monday, October 5, 2026

BDA Apartments

ನಾಡು ಕಂಡ ಶ್ರೇಷ್ಠ ಮುತ್ಸದ್ಧಿ ರಾಜಕಾರಣಿ ಎಸ್.ಎಂ ಕೃಷ್ಣ: ಅವರ ಆಡಳಿತ ವೈಖರಿ ರ...
Home Front Page  ನಾವು ಕೆಲಸ ಮಾಡಿದ್ದೇವೆ ಉಪ ಚುನಾವಣೆಯಲ್ಲಿ ಮತಹಾಕಿ- ಸಿಎಂ ಸಿದ್ದರಾಮಯ್ಯ ಮನವಿ

 ನಾವು ಕೆಲಸ ಮಾಡಿದ್ದೇವೆ ಉಪ ಚುನಾವಣೆಯಲ್ಲಿ ಮತಹಾಕಿ- ಸಿಎಂ ಸಿದ್ದರಾಮಯ್ಯ ಮನವಿ

ಬಾಗಲಕೋಟೆ,ಏಪ್ರಿಲ್,4,2026 (www.justkannada.in):  ನಾವು ಕೆಲಸ ಮಾಡಿದ್ದೇವೆ. ಹೀಗಾಗಿ ನಮ್ಮ ಅಭ್ಯರ್ಥಿಗೆ ಮತ ಹಾಕಿ ಗೆಲ್ಲಿಸಿ ಎಂದು ಸಿಎಂ ಸಿದ್ದರಾಮಯ್ಯ ಮನವಿ ಮಾಡಿದರು.

ಬಾಗಲಕೋಟೆಯಲ್ಲಿ ಇಂದು ಮಾತನಾಡಿದ ಸಿಎಂ ಸಿದ್ದರಾಮಯ್ಯ,  ಶಕ್ತಿ ಯೋಜನೆಯಡಿ ನನ್ನ ಪತ್ನಿಯೂ ಹೋಗಬಹುದು ಎಂದಿದ್ದೆ. ಪರಮೇಶ್ವರ್  ಎಸ್ ಆರ್ ಪಾಟೀಲ್ ಪತ್ನಿಯೂ ಹೋಗಬಹುದು ನಾವು ಕೆಲಸ ಮಾಡಿದ್ದೇವೆ.  ಉಪಚುನಾವಣೆಯಲ್ಲಿ ಮತಹಾಕಿ.  ಬಿಜೆಪಿಯವರು ಏನು ಮಾಡಿದ್ದಾರೆ ಎಂದು ಅವರೇ ಹೇಳಬೇಕು ಎಂದರು.

ಸಾಮಾಜಿಕ ಕ್ಷೇತ್ರದಲ್ಲಿ ಹೂಡಿಕೆ ಅನ್ನೋದು ಮುಖ್ಯ ಅಭಿವೃದ್ದಿ ಅಂದರೆ ಕೇವಲ ರಸ್ತೆ ನೀರಾವರಿ ಅಷ್ಟೆ ಅಲ್ಲ ಆರ್ಥಿಕವಾಗಿ ಸ್ವಾವಲಂಬಿ ಮಾಡೊದು ಬಹಳ ಮುಖ್ಯ.  ನಾವು ಯೋಜನೆ ಘೋಷಿಸಿದರೆ ಬಿಜೆಪಿಗರು ನಗುತ್ತಿದ್ದರು . ಬಿಜೆಪಿಯವರು ಬಹಳ ಅಪಪ್ರಚಾರ ಮಾಡಿದ್ದಾರೆ ಸಿದ್ದರಾಮಯ್ಯ  ಸಾಲ ಮಾಡಿದ್ದಾರೆ   ಎಂದು ಅಪಪ್ರಚಾರ ಮಾಡಿದ್ದಾರೆ  ಎಂದು ಹರಿಹಾಯ್ದರು.

Key words: vote, by-elections, CM, Siddaramaiah