ಸಿಎಂ, ಡಿಸಿಎಂ ರಾಜೀನಾಮೆಗೆ ಬಿಜೆಪಿ ಆಗ್ರಹ: ಸಚಿವ ರಾಮಲಿಂಗರೆಡ್ಡಿ ತಿರುಗೇಟು

ಬೆಂಗಳೂರು,ಜೂನ್,17,2025 (www.justkannada.in):  ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತದಿಂದ 11 ಮಂದಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ, ಡಿಸಿಎಂ ರಾಜೀನಾಮೆಗೆ ಆಗ್ರಹಿಸಿದ ಬಿಜೆಪಿಗೆ ಸಾರಿಗೆ ಸಚಿವ ರಾಮಲಿಂಗರೆಡ್ಡಿ ತಿರುಗೇಟು ನೀಡಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ರಾಮಲಿಂಗರೆಡ್ಡಿ, ದುರಂತಗಳು ಸಂಭವಿಸಿದ ಬೇರೆ ರಾಜ್ಯಗಳ ಸಿಎಂ ಡಿಸಿಎಂ  ರಾಜೀನಾಮೆ ನೀಡಲಿ. ಆ ಮೇಲೆ ನಮ್ಮ ಸಿಎಂ ಡಿಸಿಎಂ ರಾಜೀನಾಮೆ ಬಗ್ಗೆ ಯೋಚಿಸುತ್ತೇವೆ ಎಂದರು.

ಸಾವಿನ ವಿಚಾರದಲ್ಲೂ ಬಿಜೆಪಿ ರಾಜಕೀಯ ಮಾಡುತ್ತಿದ್ದಾರೆ.  ಬಿಜೆಪಿಯವರು ರಣಹದ್ದುಗಳ ರೀತಿ ಕಾಯುತ್ತಿದ್ದಾರೆ. 11 ಅಭಿಮಾನಿಗಳು ಮೃತಪಟ್ಟಿದ್ದು ದುಃಖಕರ ವಿಚಾರ.  ಸಿಎಂ, ಸಾಂತ್ವಾನ ಹೇಳಿದ್ದಾರೆ ಪರಿಹಾರ ನೀಡಿದ್ದಾರೆ.  ಸಂಬಂಧಪಟ್ಟವರ ವಿರುದ್ದವೂ ಕ್ರಮ ಆಗಿದೆ. ಹೀಗೆ ಅಗುತ್ತೆ ಎಂದು ಸರ್ಕಾರ ನಿರೀಕ್ಷೆ ಮಾಡಿರಲಿಲ್ಲ. ಇದರ ಬಗ್ಗೆ ಗುಪ್ತಚರ ಇಲಾಖೆಗೂ ಸ್ಪಷ್ಟನೆ ಇರಲಿಲ್ಲ  ಎಂದರು.

ಹಲವು ರಾಜ್ಯಗಳಲ್ಲೂ ದುರಂತ ಸಂಭವಿಸಿ ಹಲವು ಜನರು ಮೃತಪಟ್ಟಿದ್ದಾರೆ.  ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲೂ ದುರಂತ ನಡೆದಿವೆ.  ಈ ಘಟನೆಗಳ ಬಗ್ಗೆ ತನಿಖೆ ಮಾಡಿಸುವಂತೆ ಕೇಂದ್ರಕ್ಕೆ ಒತ್ತಾಯಿಸಲಿ ಎಂದು ಸಚಿವ ರಾಮಲಿಂಗರೆಡ್ಡಿ ಟಾಂಗ್ ನೀಡಿದರು.

ಕಾಲ್ತುಳಿತದಲ್ಲಿ ಮೃತಪಟ್ಟ ಕುಟುಂಬಗಳಿಗೆ ಆರ್ ಸಿಬಿ ತಲಾ 1 ಕೋಟಿ ರೂ ಪರಿಹಾರ ನೀಡಲಿ ಎಂದು ರಾಮಲಿಂಗರೆಡ್ಡಿ ಆಗ್ರಹಿಸಿದರು.vtu

Key words: BJP, resignation, CM, DCM, Minister Ramalinga Reddy