ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ  ಅನುಮತಿ ಬಗ್ಗೆ ಆ.30 ರಂದು ನಿರ್ಧಾರ-ಸಚಿವ ಆರ್.ಅಶೋಕ್.

ಬೆಂಗಳೂರು,ಆಗಸ್ಟ್,27,2022(www.justkannada.in): ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ  ಅನುಮತಿ ನೀಡುವ ಬಗ್ಗೆ ಆಗಸ್ಟ್ 30 ರಂದು ನಿರ್ಧಾರ ಮಾಡುತ್ತೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

ಚಾಮರಾಜಪೇಟೆ ನಾಗರೀಕರ ಒಕ್ಕೂಟದ ಜೊತೆ ಸಭೆ ನಡೆಸಿ ಚರ್ಚಿಸಿದ ಬಳಿಕ ಮಾತನಾಡಿದ ಸಚಿವ ಆರ್.ಅಶೋಕ್, ಗಣೇಶೋತ್ಸವದ ಬಗ್ಗೆ ಸ್ಥಳೀಯರ ಜೊತೆ ಚರ್ಚಿಸಿದೆ. ಗಣೇಶ ಕೂರಿಸೋದು ಮುಖ್ಯ ಎಂದಿದ್ದಾರೆ.  ಸೋಮವಾರ ವಕ್ಫ್ ಬೋರ್ಡ್ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇದೆ.  ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇದೆ. ಕಂದಾಯ ಇಲಾಖೆ ಈಗಾಗಲೇ ಸುಪ್ರೀಂ ಕೋರ್ಟ್ ಗೆ ಕೆವಿಯಟ್ ಸಲ್ಲಿಸಿದೆ.

ಸರ್ಕಾರನೇ ಗಣೇಶೋತ್ಸವ ಆಚರಿಸಿದ್ರೆ ಒಳ್ಳೆಯದು ಎಂಬ ಅಭಿಪ್ರಾಯವಿದೆ. ಇನ್ನು ಗಣೇಶೋತ್ಸವಕ್ಕೆ  ಅನುಮತಿ ನೀಡುವ ಸಂಬಂಧ ಆಗಸ್ಟ್ 30 ರಂದು ಅಂತಿಮ ನಿರ್ಧಾರ ಮಾಡುತ್ತೇವೆ ಎಂದು ಸಚಿವ ಆರ್.ಅಶೋಕ್ ತಿಳಿಸಿದರು.

Key words: Minister -R. Ashok – permission -Ganeshotsav – Eidgah Maidan- Aug. 30