ಪಿಎಸ್ ಐ ನೇಮಕಾತಿ ಅಕ್ರಮ ಪ್ರಕರಣ: ಮೊದಲ ರ್ಯಾಂಕ್ ಪಡೆದಿದ್ದ ಆರೋಪಿಯ ಬಂಧನ.

ಕಲ್ಬರ್ಗಿ,ಆಗಸ್ಟ್,27 ,2022(www.justkannada.in): ಪಿಎಸ್ ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಕೋಟಾದಲ್ಲಿ ಮೊದಲ ರ್ಯಾಂಕ್ ಪಡೆದಿದ್ದ ಆರೋಪಿಯನ್ನ ಸಿಐಡಿ ಪೊಲೀಸರು ಬಂಧಿಸಿದ್ದಾರೆ.

ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ನಿವಾಸಿ ರಚನಾ ಬಂಧಿತ ಆರೋಪಿ. ರಚನಾ ಮಹಿಳಾ ಕೋಟಾದಡಿ ಮೊದಲ ರ್ಯಾಂಕ್ ಪಡೆದಿದ್ದು, ಅಕ್ರಮ ಖಂಡಿಸಿ ಹೋರಾಟದಲ್ಲೂ ಮುಂಚೂಣಿಯಲ್ಲಿದ್ದಳು.

ಕಲ್ಬುರ್ಗಿ ಜಿಲ್ಲೆ ಆಳಂದ ತಾಲ್ಲೂಕಿನ ಹಿರೋಳಿ  ಬಳಿ ಆರೋಪಿ ರಚನಾಳನ್ನ ಸಿಐಡಿ ಪೊಲೀಸರು ಬಂಧಿಸಿದ್ದಾರೆ ರಚನಾ  ವಿರುದ್ಧ ಹೈಗ್ರೌಂಢ್ಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.  ದೂರು ದಾಖಲಾದ ನಂತರ ಆರೋಪಿ ರಚನಾ ನಾಪತ್ತೆಯಾಗಿದ್ದಳು. ಕೆಲ ದಿನಗಳು ಮಹಾರಾಷ್ಟ್ರದಲ್ಲಿ ತಲೆಮರಿಸಿಕೊಂಡಿದ್ದಳು.ganja peddlers arrested by mysore police

ಆರೋಪಿ ರಚನಾಳನ್ನ ಬಂಧಿಸಲು ಹಲವು ದಿನಗಳಿಂದ ಪೊಲೀಸರು ತೀವ್ರ ಶೋಧ ನಡೆಸಿದ್ದರು.  ನಿನ್ನೆ ರಾತ್ರಿ ರಚನಾ ಬಂಧನವಾಗಿದ್ದು, 5ನೇ ಜೆಎಂಎಫ್ ಸಿಕೋರ್ಟ್ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು.

Key words: PSI-Recruitment -Illegal Case-Arrest