ಬಾಡಿಗೆ ಭಾಷಣಕಾರರನ್ನೆಲ್ಲಾ ಲೇಖಕರನ್ನಾಗಿ ಮಾಡಿದ್ದಾರೆ- ಚಕ್ರವರ್ತಿ ಸೂಲಿಬೆಲೆ ಪಾಠ ಪ್ರಸ್ತಾಪಿಸಿ ಬಿಜೆಪಿಗೆ ಸಚಿವ ಪ್ರಿಯಾಂಕ್ ಖರ್ಗೆ ಟಾಂಗ್.

ಬೆಂಗಳೂರು,ಜೂನ್,9,2023(www.justkannada.in): ಪಠ್ಯಕ್ಕೆ  ವಾಗ್ಮಿ  ಚಕ್ರವರ್ತಿ ಸೂಲಿಬೆಲೆ ಪಾಠ  ಸೇರಿಸಿದ ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಗುಡುಗಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ,  ಯಾವ ಆಧಾರದಲ್ಲಿ ಚಕ್ರವರ್ತಿ ಸೂಲಿಬೆಲೆ ಪಾಠ ಹಾಕಿದ್ದಾರೆ. ಸೂಲಿಬೆಲೆ ಏನಾದ್ರೂ ಪಿಎಚ್ ಡಿ ಮಾಡಿದ್ರಾ..?  ಬಾಡಿಗೆ ಭಾಣಕಾರರನ್ನೆಲ್ಲಾ ಲೇಖಕರಾಗಿ ಮಾಡಿದ್ದಾರೆ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅಷ್ಟು ಬರ ಬಂದಿದೆಯಾ  ಎಂದು ಬಿಜೆಪಿಗೆ ಟಾಂಗ್ ನೀಡಿದರು.

ಬಿಜೆಪಿ ಸರ್ಕಾರ ಅವಧಿಯ  ಚಕ್ರವರ್ತಿ ಸೂಲಿಬೆಲೆ ಬರೆದ ಪಠ್ಯ ತೆಗೆಯುತ್ತೇವೆ. ನಾನು ಚಕ್ರವರ್ತಿ ಸೂಲಿಬೆಲೆ ಬರೆದ ಪಠ್ಯ ಓದಿಲ್ಲ. ಶಾಲೆಗಳಲ್ಲಿ ನಮ್ಮ ಮಕ್ಕಳು ಆ ಪಠ್ಯವನ್ನ ಓದುವುದು ಬೇಡ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

Key words: Minister- Priyank Kharge -Tong – BJP – proposing Chakravarthi Sulibele- lesson.