ಬಾಡಿಗೆ ಮನೆಯಲ್ಲಿರುವವರ ಪಾಲಿಗೆ ಉಚಿತ ವಿದ್ಯುತ್ ಗಗನ ಕುಸುಮ- ಸರ್ಕಾರದ ವಿರುದ್ಧ ಬಿಜೆಪಿ ಘಟಕ ಆಕ್ರೋಶ.  

ಬೆಂಗಳೂರು,ಜೂನ್,9,2023(www.justkannada.in): ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲೊಂದಾದ ಗೃಹಜ್ಯೋತಿ ಯೋಜನೆ ಕುರಿತು ಸರ್ಕಾರದ ವಿರುದ್ಧ ರಾಜ್ಯ ಬಿಜೆಪಿ ಘಟಕ ಕಿಡಿಕಾರಿದೆ.

ಗೃಹಜ್ಯೋತಿ ಯೋಜನೆ ವಿಚಾರ ಕುರಿತು ಟ್ವೀಟ್ ಮಾಡಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ರಾಜ್ಯ ಬಿಜೆಪಿ ಘಟಕ,  ನದಿ ದಾಟಿದ ಮೇಲೆ ಅಂಬಿಗ ಯಾಕೆಂಬ ಧೋರಣೆಯಲ್ಲೀಗ ಸಿದ್ದರಾಮಯ್ಯ ಸರ್ಕಾರವಿದೆ. ಬದುಕು ಕಟ್ಟಿಕೊಂಡ ಹೆಚ್ಚಿನವರು ಬಾಡಿಗೆ ಮನೆಗಳಲ್ಲಿ ವಾಸವಾಗಿರುತ್ತಾರೆ. ಬಾಡಿಗೆ ಮನೆಯಲ್ಲಿರುವವರ ಪಾಲಿಗೆ ಉಚಿತ ವಿದ್ಯುತ್ ಗಗನ ಕುಸುಮವಾಗಿದೆ. ಅಷ್ಟೇ ಅಲ್ಲ ಹೊಸದಾಗಿ ಮನೆ ಕಟ್ಟಿದವರಿಗೆ ಈ ಯೋಜನೆ ಅಸ್ಪೃಶ್ಯ. ಉಚಿತ ಬಿಡಿ, ಮೊದಲು ವಿದ್ಯುತ್ ಪೂರೈಸಿ ಎಂದು ಜನ ಶಾಪ ಹಾಕುತ್ತಿದ್ದಾರೆ ಎಂದು  ಆಕ್ರೋಶ ವ್ಯಕ್ತಪಡಿಸಿದೆ.

Key words: Free -electricity – rented -houses – BJP -outraged – government.