ನ್ಯಾಷನಲ್ ಹೆರಾಲ್ಡ್ ಡಿಕೆಶಿಗೆ ನೋಟಿಸ್: ಇದೊಂದು ಹೆದರಿಸುವ ತಂತ್ರ- ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿ,ಡಿಸೆಂಬರ್,6,2025 (www.justkannada.in):  ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಡಿಕೆ ಸುರೇಶ್ ಅವರಿಗೆ ಇಡಿ ನೋಟಿಸ್ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಗ್ರಾಮೀಣಾಭಿವೃದ್ದಿ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಇದೊಂದು ಹೆದರಿಸುವ ತಂತ್ರ ಎಂದಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ಪ್ರಿಯಾಂಕ್ ಖರ್ಗೆ, 8 ವರ್ಷಗಳಿಂದ ಈ ಪ್ರಕರಣದಲ್ಲಿ ತನಿಖೆ ನಡೆಸುತ್ತಿದ್ದಾರೆ ಆದರೆ  ಹಣ ಎಲ್ಲಿಂದ ಬಂತು.  ಎಲ್ಲಿಗೆ ಹೋಯ್ತು ಗೊತ್ತಿಲ್ಲ. ಇದೇ ಕೇಸನ್ನ ಆರ್ ಎಸ್ಎಸ್ ವಿರುದ್ದ ಯಾಕೆ ಹಾಕಿಲ್ಲ ಎಂದು ಪ್ರಶ್ನಿಸಿದರು

ಆರ್ ಎಸ್ ಎಸ್ ಗೆ ಯಾಕೆ ತೆರಿಗೆ ಇಲ್ಲ. ಅವರ ಗುರು ಯಾರು?  ಆರ್ ಎಸ್ಎಸ್ ನವರಿಗೆ ಹೇಗೆ ಅನುದಾನ ಬರುತ್ತದೆ. ಅಮೆರಿಕಾದಲ್ಲಿ ಆರ್ ಎಸ್ 330 ಕೋಟಿ ಡಾಲರ್  ಇಟ್ಟಿದ್ದಾರೆ. ಆ ಹಣ ಯಾರದ್ದು ಆರ್ ಎಸ್ ಎಸ್ ಬಿಜೆಪಿ ಹೇಳಲಿ ಎಂದು ಆಗ್ರಹಿಸಿದರು.

Key words: National Herald, notice,  DK Shivakumar, Minister, Priyank Kharge