Sunday, August 2, 2026

BDA Apartments

Home Front Page ಸಿಎಂ ಔತಣಕೂಟ: ಒಳಮೀಸಲಾತಿ, ಬಜೆಟ್ ಅಧಿವೇಶನ ಬಗ್ಗೆ ಚರ್ಚಿಸಬಹುದು- ಸಚಿವ ರಾಮಲಿಂಗರೆಡ್ಡಿ

ಸಿಎಂ ಔತಣಕೂಟ: ಒಳಮೀಸಲಾತಿ, ಬಜೆಟ್ ಅಧಿವೇಶನ ಬಗ್ಗೆ ಚರ್ಚಿಸಬಹುದು- ಸಚಿವ ರಾಮಲಿಂಗರೆಡ್ಡಿ

ಬೆಂಗಳೂರು,ಮಾರ್ಚ್,16,2026 (www.justkannada.in):  ಸಚಿವರಿಗೆ ಸಿಎಂ ಸಿದ್ದರಾಮಯ್ಯ ಔತಣಕೂಟ ಏರ್ಪಡಿಸಿರುವ ವಿಚಾರ ಸಂಬಂಧ ನನಗೂ ಸಿಎಂ ಸಿದ್ದರಾಮಯ್ಯ ಅಹ್ವಾನ ನೀಡಿದ್ದಾರೆ. ನಾನೂ ಹೋಗುತ್ತೇನೆ ಎಂದು ಸಾರಿಗೆ ಸಚಿವ ರಾಮಲಿಂಗರೆಡ್ಡಿ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ರಾಮಲಿಂಗರೆಡ್ಡಿ, ಸಿಎಂ ಔತಣಕೂಟದಲ್ಲಿ ಒಳಮೀಸಲಾತಿ  ಬಜೆಟ್  ಅಧಿವೇಶನ ಕುರಿತು ಮಾತನಾಡಬಹುದು ಡಿಸಿಎಂ ಡಿಕೆ ಶಿವಕುಮಾರ್  ಜಿಬಿಎ ಚುನಾವಣೆ ಮಾಡುತ್ತೇವೆ ಎಂದಿದ್ದಾರೆ ವಾರ್ಡ್ ವಿಂಗಡಣೆ ಆಗಿದೆ ಆಕ್ಷೇಪಣೆಗೆ ಸಲ್ಲಿಕೆಗೆ ಕಾಲಾವಕಾಶವಿತ್ತು. ನಾವು ಸರಿಯಾಗಿ ವಾರ್ಡ್ ವಿಂಗಡಣೆ ಮಾಡಿದ್ದೇವೆ. ಬೆಂಗಳೂರಿನ ಐದು ಪಾಲಿಕೆಯಲ್ಲೂ ಗೆಲ್ಲಲು ಪ್ರಯತ್ನ ಮಾಡುತ್ತೇವೆ ಎಂದರು.

ಕಾವೇರಿ 4ನೇ ಹಂತ ಬಿಟ್ಟರೆ ಉಳಿದೆಲ್ಲ ಹಂತವನ್ನ ತಂದಿದ್ದು ಕಾಂಗ್ರೆಸ್.  ಬೆಂಗಳೂರಿಗೆ ಕಾಂಗ್ರೆಸ್ ಕೊಡುಗೆ ಇದೆ  ಎಂದರು.

ಹಾಗೆಯೇ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಉಪಚುನಾವಣೆಯಲ್ಲಿ ನಾವೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Key words: CM, banquet, Minister, Ramalinga Reddy