ನಾನು ಮಿನಿಸ್ಟರ್ ಆಗಲ್ಲ ಅಂತ ನಿಮಗೆ ಡೌಟ್ ಇದೆಯಾ..? ಪರಿಷತ್ ಸದಸ್ಯ ಹೆಚ್.ವಿಶ್ವನಾಥ್…

ಮೈಸೂರು,ಆ,17,2020(www.justkannada.in):  ಸಿಎಂ ಬಿಎಸ್ ಯಡಿಯೂರಪ್ಪ ಸಂಪುಟದಲ್ಲಿ ತಾವು ಸಚಿವರಾಗುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮದವರು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್, ರಾಜಕೀಯದಲ್ಲಿ ಪ್ರತಿಯೊಬ್ಬರಿಗೂ‌ ಅಧಿಕಾರದ ಆಸೆ ಇರುತ್ತೆ. ಹಾಗೆಯೇ ನನಗೂ ಮಂತ್ರಿ ಆಗಬೇಕೆಂಬ ಆಸೆ ಇದೆ. ನಾನು ಮಿನಿಸ್ಟರ್ ಆಗಲ್ಲ ಅಂತ ನಿಮಗೆ ಡೌಟ್ ಇದ್ಯ ಎಂದು ಮರು ಪ್ರಶ್ನಿಸಿದರು.jk-logo-justkannada-logo

ಮೈಸೂರಿನಲ್ಲಿ ಇಂದು ಮಾತನಾಡಿದ ಎಂಎಲ್ ಸಿ ಹೆಚ್.ವಿಶ್ವನಾಥ್, ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು. ನನಗೂ ಮಂತ್ರಿ ಆಗಬೇಕೆಂಬ ಆಸೆ ಇದೆ. ನಾನು ಮಿನಿಸ್ಟರ್ ಆಗಲ್ಲ ಅಂತ ನಿಮಗೆ ಡೌಟ್ ಇದೆಯಾ ಎಂದು ಮಾಧ್ಯಮದವರನ್ನೇ ಪ್ರಶ್ನಿಸುವ ಮೂಲಕ  ಈ ಸರ್ಕಾರದಲ್ಲೇ ಸಚಿವನಾಗ್ತೀನಿ ಎಂದು ಪರೋಕ್ಷವಾಗಿ ಹೇಳಿದರು.

ಮುಂದುವರೆದ ಸಾ ರಾ ಮಹೇಶ್ ಹಳ್ಳಿಹಕ್ಕಿ ಜಟಾಪಟಿ…

ಮೈಸೂರಿನಲ್ಲಿ ಶಾಸಕ ಸಾ ರಾ ಮಹೇಶ್ ಮತ್ತು ಹಳ್ಳಿಹಕ್ಕಿ  ಹೆಚ್.ವಿಶ್ವನಾಥ್  ನಡುವೆ ಜಟಾಪಟಿ ಮುಂದುವರೆದಿದ್ದು, ಕೊಚ್ಚೆಗುಂಡಿ, ಭಿಕ್ಷುಕ ಎಂದು ಪರಸ್ಪರ ಉಭಯ ನಾಯಕರು  ಕರೆದುಕೊಂಡ ಪ್ರಸಂಗ ನಡೆಯಿತು.minister-position-mlc-h-vishwanath-tong-sa-ra-mahesh

ಬೆಳಗ್ಗೆ ಸುದ್ದಿಗೋಷ್ಠಿಯಲ್ಲಿ ವಿಶ್ವನಾಥ್ ಭಿಕ್ಷುಕ ಅವರ ಬಗ್ಗೆ ಮಾತನಾಡಲ್ಲ ಎಂದು ಶಾಸಕ ಸಾ.ರಾ ಮಹೇಶ್ ಹೇಳಿಕೆ ನೀಡಿದ ಬೆನ್ನಲ್ಲೆ ತಿರುಗೇಟು ನೀಡಿದ ಹೆಚ್, ವಿಶ್ವನಾಥ್ , ಸಾರ ಮಹೇಶ್ ಕೊಚ್ಚೆಗುಂಡಿ ಎಂದು ಮೊದಲೇ ಹೇಳಿದ್ದೇನೆ. ನಾನು ಶುಭ್ರವಾದ ಬಟ್ಟೆ ಹಾಕಿದ್ದೇನೆ. ಕೊಚ್ಚೆಗುಂಡಿಗೆ ಕಲ್ಲು ಹೊಡೆದು ನಾನೇಕೆ ನನ್ನ ಬಟ್ಟೆ ಕೊಚ್ಚೆ ಮಾಡಿಕೊಳ್ಳಲಿ. ನಾನು ಅವರ ಬಗ್ಗೆ ಏನು ಮಾತನಾಡುವುದಿಲ್ಲ ಎಂದು ಹೆಚ್,ವಿಶ್ವನಾಥ್ ಟಾಂಗ್ ನೀಡಿದರು.

Key words: Minister-position-MLC-H. Vishwanath -tong-sa.ra mahesh