ಬೆಂಗಳೂರಿನಲ್ಲಿ ಸೀಲ್ ಡೌನ್ ಪದ್ಧತಿ ರದ್ದು…

ಬೆಂಗಳೂರು, ಆಗಸ್ಟ್,17,2020(www.justkannada.in):  ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಮಹಾಮಾರಿ ಅಟ್ಟಹಾಸ ಮೆರೆಯುತ್ತಿದ್ದು ಈ ನಡುವೆ ನಗರದಲ್ಲಿ ಸೀಲ್ ಡೌನ್ ಪದ್ಧತಿ ಕೈ ಬಿಟ್ಟು ಅಗತ್ಯವಿರುವಲ್ಲಿ ಕಂಟೈನ್ ಮೆಂಟ್ ಜೋನ್ ಮಾಡುವುದಕ್ಕೆ ಬಿಬಿಎಂಪಿ ನಿರ್ಧಾರ ಮಾಡಿದೆ.jk-logo-justkannada-logo

ಬಿಬಿಎಂಪಿ ಅಧಿಕಾರಿಗಳು ಬೇಕಾಬಿಟ್ಟಿ ಬಿಲ್ ಮಾಡುತ್ತಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ  ಸೀಲ್ ಡೌನ್ ಪದ್ಧತಿ ಕೈ ಬಿಡಲಾಗಿದೆ. ಅದಲ್ಲದೇ ನೂರು ಮೀಟರ್ ವ್ಯಾಪ್ತಿಯಲ್ಲಿ 3 ಮಂದಿಗಿಂತ ಹೆಚ್ಚು ಮಂದಿಗೆ ಕೊರೋನಾ ಕಂಡು ಬಂದಲ್ಲಿ. ಆ ಭಾಗವನ್ನು ಕಂಟೈನ್ ಜೋನ್ ಮಾಡಲು ತೀರ್ಮಾನಿಸಲಾಗಿದೆ.cancel-seal-down-system-bangalore

ಬೆಂಗಳೂರಿನಲ್ಲಿ ಇತ್ತೀಚೆಗೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಪಾಲಿಕೆ ಹಣವನ್ನು ಬಹಳ ಎಚ್ಚರಿಕೆಯಿಂದ ಖರ್ಚು ಮಾಡಬೇಕಿದೆ. ಸೀಲ್ ಡೌನ್ ಬದಲಿಗೆ ಕೊರೊನಾ ಸೋಂಕಿತ ಸುತ್ತಮುತ್ತಲಿನ ಜನರಿಗೆ ಮಾನವೀಯ ದೃಷ್ಟಿಯಿಂದ ನಡೆದುಕೊಳ್ಳುವಂತೆ ಅರಿವು ಮೂಡಿಸಲಾಗುವುದು. ಅನಗತ್ಯ ಬಿಲ್ ಕುರಿತು ಮಾಹಿತಿ ಪಡೆಯಲಾಗುವುದು ಎಂದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ್ ಹೇಳಿದರು.

Key words: cancel- seal-down -system – Bangalore