ಡಿ.ಕೆ ಶಿವಕುಮಾರ್ ಅವರೇ ಬಿಜೆಪಿಗೆ ಬರುವಂತೆ ಸಚಿವ ಮುನಿರತ್ನ ಆಹ್ವಾನ.

ಬೆಂಗಳೂರು,ನವೆಂಬರ್,7,2022(www.justkannada.in):  ಕಾಂಗ್ರೆಸ್ ಗೆ ಬರಲು ವಲಸಿಗರಿಗೂ ಮುಕ್ತ ಆಹ್ವಾನ ನೀಡಿದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗೆ ಸಚಿವ ಮುನಿರತ್ನ ತಿರುಗೇಟು ನೀಡಿದ್ದಾರೆ.

ಬೆಂಗಳೂರಿನಲ್ಲಿ ಇಂದು ಮಾತನಾಡಿದ ಸಚಿವ ಮುನಿರತ್ನ,  ಡಿಕೆ ಶಿವಕುಮಾರ್ ಅವರೇ ಬಿಜೆಪಿಗೆ ಬರಲಿ.  ನಾವು 17 ಜನ ಬಿಜೆಪಿಗೆ ಸೇರ್ಪಡೆಯಾಗಿದ್ದೇವೆ. 18ನೇಯವರಾಗಿ ಡಿಕೆ ಶಿವಕುಮಾರ್ ಬರಲಿ. ಡಿಕೆಶಿಗೆ ಕಾಂಗ್ರೆಸ್ ನಲ್ಲಿ ಭವಿಷಯ ಇಲ್ಲ.  ಪರಮೇಶ್ವರ್ ಮುಂದಿನ ಸಿಎ ಅಂತಾರೆ. ಇನ್ನೊಂದೆಡೆ ಸಿದ್ಧರಾಮಯ್ಯ ಅವರೇ ಮುಂದಿನ ಸಿಎಂ ಅಂತಾರೆ.  ಈ ಬಡಿದಾಟದಲಿ ಡಿ.ಕೆ ಶಿವಕುಮಾರ್ ಸಿಎಂ ಆಗೋದು ಅನುಮಾನ. ಹೀಗಾಗಿ ಡಿಕೆಶಿ ಬಿಜೆಪಿಗೆ ಬಂದರೆ ಒಳ್ಳೆಯದಾಗುತ್ತೆ ಎಂದು ಟಾಂಗ್ ನೀಡಿದರು.

ವಲಸಿಗರ ಮೇಲೆ ಪ್ರೀತಿಯಿಂದಾಗಿ ಡಿಕೆಶಿ  ಆಹ್ವಾನಿಸಿದ್ದಾರೆ.  ಆಗ ನಮ್ಮ ಅವಶ್ಯಕತೆ ಇಲ್ಲ ಎಂದಿದ್ದಾರು. ಈಗ ಯಾಕೆ ಕರೆಯುತ್ತಿದ್ದಾರೆ…?  ಬಿಜೆಪಿಯಲ್ಲಿ  ಚೆನ್ನಾಗಿ ನಡೆಸಿಕೊಂಡಿದ್ದಾರೆ. ಇಲ್ಲೇ ನೆಮ್ಮದಿಯಾಗಿದ್ದೇವೆ ಎಂದು ಸಚಿವ ಮುನಿರತ್ನ ಹೇಳಿದರು.

Key words: Minister –Munirathna- invites -DK Shivakumar – join- BJP.