ಕಾಂಗ್ರೆಸ್ ಭ್ರಷ್ಟಾಚಾರದ ಗಂಗೋತ್ರಿ- ಸಿದ್ಧರಾಮಯ್ಯ ವಿರುದ್ಧ ಸಿಎಂ ಬೊಮ್ಮಾಯಿ ವಾಗ್ದಾಳಿ.

ಉಡುಪಿ,ನವೆಂಬರ್,7,2022(www.justkannada.in): ಜೀವನದಲ್ಲಿ ಇಂತಹ ಭ‍್ರಷ್ಟ ಸರ್ಕಾರವನ್ನ ನೋಡಿರಲಿಲ್ಲ ಎಂದು ಹೇಳಿಕೆ ನೀಡಿದ್ಧ ಕಾಂಗ್ರೆಸ್ ನಾಯಕರ ವಿರುದ್ಧ  ಸಿಎಂ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದ್ಧಾರೆ.

ಉಡುಪಿಯಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ ಭ್ರಷ್ಟಾಚಾರದ ಗಂಗೋತ್ರಿ. ಭ್ರಷ್ಟಾಚಾರ ಆರಂಭವಾಗಿದ್ದೇ ಕಾಂಗ್ರೆಸ್ ನಿಂದ.  ದೇಶದಲ್ಲಿ 50 ವರ್ಷ ಪೂರ್ಣ ಭ್ರಷ್ಟಸರ್ಕಾರವೇ ಆಡಳಿತದಲ್ಲಿತ್ತು. ಕಾಂಗ್ರೆಸ್ ನಿಂದ ದಾಖಲೆ ಪ್ರಮಾಣಧಲ್ಲಿ ಭ್ರಷ್ಟಾಚಾರ ಆಗಿದೆ ಸುಳ್ಳು ಅಂದ್ರೆ ಕಾಂಗ್ರೆಸ್, ಕಾಂಗ್ರೆಸ್ ಅಂದ್ರೆ ಸುಳ್ಳು  ಎಂದು ಕಿಡಿಕಾರಿದರು.

ಸಿದ್ಧರಾಮಯ್ಯ ವಿರುದ್ಧ ಕಿಡಿಕಾರಿದ ಸಿಎಂ ಬೊಮ್ಮಾಯಿ, ಕಾಂಗ್ರೆಸ್ ಪಕ್ಷ  ಅಧಿಕಾರಕ್ಕೆ ಬರುತ್ತೆ ಅಂತಾ ಭ್ರಮೆಯಲ್ಲಿದ್ದಾರೆ. ಸಿದ್ದರಾಮಯ್ಯಗೆ ಇದುವರೆಗೆ ಹೇಳಿದ್ದು ಯಾವುದೂ ಸತ್ಯ ಆಗಿಲ್ಲ. ಆಡಳಿತದಲ್ಲಿದ್ದಾಗ ನಾವೇ ಅಧಿಕಾರಕ್ಕೆ  ಬರುತ್ತೇವೆ ಎಂದಿದ್ಧರು. ನಂತರ ಹೆಚ್.ಡಿಕೆ ಸಿಎಂ ಆದರು.  ಬಿಎಸ್ ವೈ ಸಿಎಂ ಆದರು ಎಂದು ಟೀಕಿಸಿದರು.

Key words: Congress – Gangotri –corruption-CM Basavaraj Bommai

ENGLISH SUMMARY…

Cong. is the Gangotri of Corruption: CM Bommai counters Siddaramaiah
Udupi, November 7, 2022 (www.justkannada.in): “Chief Minister Basavaraj Bommai today in his counter against the Congress leaders statement that they have not seen such a corrupt government in their lives observed that the Congress party is a Gangotri of corruption.
Speaking to the press persons at Udupi, the Chief Minister expressed his view that corruption was started by the Congress in our country. “Our country remained corrupt for five long decades. The record of corruption is set by the Congress, Congress means lies and lies means Congress,” he alleged.
Expressing his ire upon Siddaramaiah, the Chief Minister Bommai said that the Congress party is in an illusion that they will come to power. “Anything Siddaramiah has said has become true. They had claimed they would come back to power. But HDK became the CM,” he said.
Keywords: CM Bommai/ Siddaramaiah/ Congress/ corruption/ Gangotri