Wednesday, September 16, 2026

BDA Apartments

Chip Maker Applied Materials Invest BDA JK_Adv BDA Adv
Home Front Page ಅಪ್ಲೈಡ್ ಮೆಟೀರಿಯಲ್ಸ್ ನಿಂದ 3,600 ಕೋಟಿ ರೂ. ಹೂಡಿಕೆ- ಸಚಿವ ಎಂ.ಬಿ ಪಾಟೀಲ್

ಅಪ್ಲೈಡ್ ಮೆಟೀರಿಯಲ್ಸ್ ನಿಂದ 3,600 ಕೋಟಿ ರೂ. ಹೂಡಿಕೆ- ಸಚಿವ ಎಂ.ಬಿ ಪಾಟೀಲ್

ಬೆಂಗಳೂರು,ಸೆಪ್ಟಂಬರ್,16,2026 (www.justkannada.in):  ಅಮೆರಿಕ ಮೂಲದ ಸೆಮಿಕಂಡಕ್ಟರ್ ಚಿಪ್ ತಯಾರಿಕಾ ಕಂಪನಿಯಾಗಿರುವ ಅಪ್ಲೈಡ್ ಮೆಟೀರಿಯಲ್ಸ್, ರಾಜ್ಯದಲ್ಲಿ ಮುಂದಿನ 10 ವರ್ಷಗಳಲ್ಲಿ 3,600 ಕೋಟಿ ರೂ. ಬಂಡವಾಳ ಹೂಡಿಕೆ ಮಾಡಲಿದೆ. ಬೆಂಗಳೂರು ಸಿಗ್ನೇಚರ್ ಬಿಝಿನೆಸ್ ಪಾರ್ಕ್ ಪ್ರದೇಶದಲ್ಲಿ ಅಸ್ತಿತ್ವಕ್ಕೆ ಬರಲಿರುವ ಈ ಯೋಜನೆಯಿಂದ 1,000 ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ.

ಈ ಸಂಬಂಧದ ಒಡಂಬಡಿಕೆಗೆ ಕಂಪನಿ ಜತೆ ಸಹಿ ಮಾಡಲಾಗಿದೆ ಎಂದು ಸಚಿವ ಎಂ.ಬಿ ಪಾಟೀಲ್‌ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಕುರಿತು ಮಾತನಾಡಿರುವ ಸಚಿವರು, ಅಪ್ಲೈಡ್ ಮೆಟೀರಿಯಲ್ಸ್ ಕಂಪನಿಯು ಈ ಹೂಡಿಕೆಯ ಮೂಲಕ ಸಂಶೋಧನೆ ಮತ್ತು ಅಭಿವೃದ್ಧಿ, ಅಗತ್ಯ ಸಾಧನಗಳ ತಯಾರಿಕೆ, ಸೆಮಿಕಂಡಕ್ಟರ್ ಚಿಪ್ ಉತ್ಪಾದನೆಗೆ ಬೇಕಾದ ಸಾಫ್ಟ್ ವೇರ್ ತಂತ್ರಜ್ಞಾನ ಅಭಿವೃದ್ಧಿಯತ್ತ ಗಮನ ಕೇಂದ್ರೀಕರಿಸಲಿದೆ. ಕೆಂಪೇಗೌಡ ವಿಮಾನ‌ ನಿಲ್ದಾಣ ಸಮೀಪದ ಬೆಂಗಳೂರು ಸಿಗ್ನೇಚರ್ ಬಿಝಿನೆಸ್ ಪಾರ್ಕ್ ಪ್ರದೇಶದಲ್ಲಿ ಜಾರಿಗೊಳ್ಳುತ್ತಿರುವ ಇಂತಹ ಪ್ರಪ್ರಥಮ ಕೈಗಾರಿಕಾ ಯೋಜನೆ ಇದಾಗಿದೆ. ಮೆಟೀರಿಯಲ್ಸ್ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿರುವ ಕಂಪನಿಯ ಈ ಹೂಡಿಕೆಯಿಂದ ಈ ವಲಯಕ್ಕೆ ಬೇಕಾದ ಕಾರ್ಯಪರಿಸರ ಸಶಕ್ತವಾಗಲಿದೆ ಎಂದಿದ್ದಾರೆ.

ಕಂಪನಿಯ ಈ ಯೋಜನೆಗೆ ಸರಕಾರವು ಎಲ್ಲ ಹಂತಗಳಲ್ಲೂ ಸಂಪೂರ್ಣ ಸಹಕಾರ ನೀಡಲಿದೆ. ಈ ಸಂಸ್ಥೆಯು ಎರಡು ದಶಕಗಳಿಂದ ಭಾರತದಲ್ಲಿ ಸಕ್ರಿಯವಾಗಿದ್ದು, ಬೆಂಗಳೂರನ್ನು ತನ್ನ ಪ್ರಮುಖ ಕೇಂದ್ರವನ್ನಾಗಿ ಇಟ್ಟುಕೊಂಡಿದೆ. ತನ್ನ ಭವಿಷ್ಯದ ಹೂಡಿಕೆಗಳಿಗೂ ಕಂಪನಿಯು ರಾಜ್ಯವನ್ನೇ ಆಯ್ದುಕೊಂಡಿರುವುದು ಸ್ವಾಗತಾರ್ಹವಾಗಿದೆ ಎಂದು ಸಚಿವ ಎಂ.ಬಿ ಪಾಟೀಲ್ ಅವರು ತಿಳಿಸಿದ್ದಾರೆ.

 

English Summary
Title

Chip Maker Applied Materials to Invest ₹3,600 crore: M.B. Patil

Short Description
Bengaluru: Applied Materials, a US-based semiconductor chip manufacturing company, will invest ₹3,600 crore in Karnataka over the next 10 years. The project, which will come up in the Bengaluru Signature Business Park area, is expected to create 1,000 jobs, Minister for Large and Medium Industries M.B. Patil said on Tuesday. With the signed MoU for the project being received, the Minister explained that Applied Materials would focus its investment on research and development, manufacturing of essential equipment, and developing software technologies required for semiconductor chip production. This is the first industrial project of its kind to be taken up in the Bengaluru Signature Business Park area, he added. The company's investment, given its strong presence in materials engineering, would further strengthen the ecosystem supporting the sector, he said. The government would extend full support to the company at every stage of the project. Applied Materials has been operating
Keywords
₹3, 600 crore, investment, Applied, Materials, Minister, M.B. Patil