ಯಾದಗಿರಿ, ಅಕ್ಟೋಬರ್,31,2026 (www.justkannada.in): ಕೇಂದ್ರ ಸರ್ಕಾರ ಕಬ್ಬಿಗೆ ಎಂಎಸ್ ಪಿ ದರ ಹೆಚ್ಚಿಸುವುದರಿಂದ ರೈತರಿಗಿಂತ ಶುಗರ್ ಫ್ಯಾಕ್ಟರಿಗಳಿಗೆ ಹೆಚ್ಚು ಲಾಭವಾಗುತ್ತದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.
ಎಂಎಸ್ ಪಿ ಸೇರಿ ಹಲವು ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ರೈತರು ಹೋರಾಟ ನಡೆಸುತ್ತಿರುವ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ಕೇಂದ್ರ ಸರ್ಕಾರ ಎಂಎಸ್ ಪಿ ಹೆಚ್ಚಿಸುವುದರಿಂದ ರೈತರಿಗೆ ಲಾಭ ಆಗಲ್ಲ ಎಂಎಸ್ ಪಿ ಹೆಚ್ಚಳದಿಂದ ರೈತರಿಗಿಂತ ಶುಗರ್ ಫ್ಯಾಕ್ಟರಿಗಳಿಗೆ ಹೆಚ್ಚು ಲಾಭವಾಗಿದೆ. ತಮಿಳುನಾಡು ಹರಿಯಾಣದಲ್ಲಿ ಬೆಂಬಲ ಬೆಲೆ ಹೆಚ್ಚಳ ಮಾಡಿದ್ದಾರೆ ಎಂದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಬ್ಬು ಬೆಳಗಾರರನ್ನ ಕೇಂದ್ರ ಸರ್ಕಾರದ ಬಳಿ ಕರೆದೊಯ್ದಿದ್ದರು. ಈಗ ಕೇಂಧ್ರ ಅದಕ್ಕಾಗಿ ಜಂಟಿ ಸಮಿತಿ ರಚನೆ ಮಾಡಿದೆ. ಎಲ್ಲಾ ರಾಜ್ಯಗಳ ಸಿಎಂ ಗಳನ್ನು ಕರೆದು ಪ್ರಧಾನಿ ಚರ್ಚಿಸಲಿದ್ದಾರೆ. ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಪ್ರಧಾನಿ ಮೋದಿ ಪರಿಹಾರ ನೀಡಲಿದ್ದಾರೆ ಎಂದು ತಿಳಿಸಿದರು.







