ಕಲಬುರಗಿ,ಜುಲೈ,22,2026 (www.justkannada.in): ರಾಜ್ಯ ವಿಧಾನಮಂಡಲ ಆಧಿವೇಶನಕ್ಕೂ ಮೊದಲು ಸಚಿವ ಸಂಪುಟ ವಿಸ್ತರಣೆಯಾಗುತ್ತದೆ ಎಂದು ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಎಂ.ಬಿ ಪಾಟೀಲ್, ಿನ್ನೂ ಎರಡು ಮೂರು ದಿನಗಳ ಬಳಿಕ ಸಚಿವ ಸಂಫುಟ ಬಗ್ಗೆ ಚರ್ಚೆ ಆಗುತ್ತೆ. ದೆಹಲಿಯಲ್ಲಿ ಪ್ರತಿಭಟನೆ ನಡೆಯುತ್ತಿದೆ. ಹೀಗಾಗಿ ಎಲ್ಲರೂ ಬ್ಯುಸಿ. ಅಧೀವೇಶನಕ್ಕೂ ಮೊದಲು ಸಂಪುಟ ವಿಸ್ತರಣೆ ಆಗುತ್ತೆ ಎಂದರು.
ದೆಹಲಿಯಲ್ಲಿ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ವಿಚಾರ, ಪ್ರಧಾನಿ ಮೋದಿ ವಿಷಾದ ವ್ಯಕ್ತಪಡಿಸಿದ್ದಾರೆಂದು ಬೇರೆಯವರು ಹೇಳುತ್ತಾರೆ. ಯುವಕನ್ನ ಕರೆದು ಮಾತನಾಡಲು ಮೋದಿಗೆ ಆಗಲ್ವ? ಪ್ರತಿಭಟನೆ ಆದ ತಕ್ಷಣ ಪ್ರಧಾನ್ ರಾಜೀನಾಮೆ ಪಡೆಯಬೇಕಿತ್ತು ಎಂದು ಎಂ.ಬಿ ಪಾಟೀಲ್ ಕಿಡಿ ಕಾರಿದರು.
Key words: Cabinet expansion, before, session, Minister, M.B. Patil







