ಬೆಂಗಳೂರು,ಜೂನ್,6,2026 (www.justkannada.in): ಬೆಂಗಳೂರು ಅಭಿವೃದ್ದಿಗೆ 100% ಕೆಲಸ ಮಾಡುತ್ತೇನೆ ಎಂದು ಬೆಂಗಳೂರು ನಗರಾಭಿವೃದ್ದಿ ಸಚಿವ ಕೃಷ್ಣಭೈರೇಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಕೃಷ್ಣಭೈರೇಗೌಡ, ನಾನು ಕಂದಾಯ ಖಾತೆಯನ್ನೇ ಕೇಳಿದ್ದೆ. ಆದರೆ ಬೆಂಗಳೂರು ಅಭಿವೃದ್ಧಿ ಖಾತೆ ನೀಡಿದ್ದಾರೆ. ಬೆಂಗಳೂರು ಅಭಿವೃದ್ದಿಗೆ 100% ಕೆಲಸ ಮಾಡುತ್ತೇನೆ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರೆ ಕೆಲಸ ಆಗುತ್ತೆ ಎಂದರು.
ಸಚಿವ ಸ್ಥಾನದ ಗೊಂದಲವನ್ನು ಸಿಎಂ ಡಿಕೆ ಶಿವಕುಮಾರ್ ಬಗೆಹರಿಸುತ್ತಾರೆ. ಖಾತೆ ವಿವಾದ ಕಗ್ಗಂಟನ್ನು ಹೈಕಮಾಂಡ್ ಬಗೆಹರಿಸುತ್ತೆ ಎಂದು ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು.
Key words: work 100%, Bengaluru, development, Minister, Krishna Bhairegowda






