ಬೆಂಗಳೂರು,ಜೂನ್,6,2026 (www.justkannada.in): 2026ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ(CET) ಫಲಿತಾಂಶವನ್ನ ಪ್ರಕಟಿಸಲಾಗಿದೆ.
ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ಸುದ್ದಿಗೋಷ್ಠಿ ನಡೆಸಿ ಸಿಇಟಿ ಫಲಿತಾಂಶವನ್ನ ಪ್ರಕಟಿಸಿದ್ದಾರೆ. ಇಂಜಿನಿಯರಿಂಗ್ ವಿಭಾಗದಲ್ಲಿ 2,83,603 ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದಾರೆ. 
ಇಂಜಿನಿಯರಿಂಗ್ ವಿಭಾಗದಲ್ಲಿ ಬೆಂಗಳೂರಿನ ಆರ್ ವಿ ಕಾಲೇಜು ವಿದ್ಯಾರ್ಥಿನಿ ತನಿಷ ಕಾರ್ತಿಕ್ ಮೊದಲ ರ್ಯಾಂಕ್ ಪಡೆದರೇ ಸೃಜನ್ 2ನೇ ರ್ಯಾಂಕ್ ಬೆಂಗಳೂರು ನಿನಾದ್ ವಸಿಷ್ಠ 3ನೇ ರ್ಯಾಂಕ್ ಪಡೆದಿದ್ದಾರೆ.
ಪಶು ವೈದ್ಯಕೀಯ ವಿಭಾಗದಲ್ಲಿ ಬೇಸ್ ಪಿಯುಕಾಲೇಜಿನ ನಯನಾ ಗೋಪಿ ಮೊದಲ ರ್ಯಾಂಕ್ ಪಡೆದಿದ್ದಾರೆ.
Key words: CET 2026, results, announced






