Wednesday, September 23, 2026

BDA Apartments

Home Front Page ಅನ್ನಭಾಗ್ಯ ಪರಿಷ್ಕರಣೆ: 13 ರಿಂದ 14 ಲಕ್ಷ ಅನರ್ಹರನ್ನು ತೆಗೆಯಬೇಕಿದೆ- ಸಚಿವ ಕೆ.ಎಚ್ ಮುನಿಯಪ್ಪ

ಅನ್ನಭಾಗ್ಯ ಪರಿಷ್ಕರಣೆ: 13 ರಿಂದ 14 ಲಕ್ಷ ಅನರ್ಹರನ್ನು ತೆಗೆಯಬೇಕಿದೆ- ಸಚಿವ ಕೆ.ಎಚ್ ಮುನಿಯಪ್ಪ

ಬೆಂಗಳೂರು,ಜೂನ್,22,2026 (www.justkannada.in): ಅನ್ನಭಾಗ್ಯ ಯೋಜನೆ ಪರಿಷ್ಕರಣೆ ವಿಚಾರಕ್ಕೆ ಸಂಬಂಧಿಸಿದಂತೆ ಆಹಾರ ಸಚಿವ ಕೆ.ಎಚ್ ಮುನಿಯಪ್ಪ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಕೆಎಚ್ ಮುನಿಯಪ್ಪ, ಅನ್ನಭಾಗ್ಯ ಯೋಜನೆ ಪರಿಷ್ಕರಣೆ ಮಾಡಬೇಕಾಗಿದೆ. ಸುಮಾರು 13 ಲಕ್ಷ ಅನರ್ಹರಿದ್ದಾರೆ ಅವರನ್ನ ತೆಗೆಯಬೇಕಿದೆ . ಬಡವರಿಗೆ ಅನ್ಯಭಾಗ್ಯ ನೀಡಬೇಕು. ಅನರ್ಹರು ಎಪಿಎಲ್ ಗೆ ಹೋಗಬೇಕು. ನಾನು ಈ ಹಿಂದೆಯೇ ಪ್ರಯತ್ನ ಮಾಡಿದ್ದೆ. ಆಗ ಗೊಂದಲ ಆಗಿತ್ತು. ಮನವಿ ಮಾಡುತ್ತಿದ್ದೇನೆ ಬಡವರಿಗೆ ಅವಕಾಶ ಮಾಡಿಕೊಡಿ ಎಂದರು.

ಸಚಿವ ಸಂಫುಟ ಉಪಸಮಿತಿ ಸಭೆ ಏಕೆ ಕರದಿದ್ದಾರೆ ಗೊತ್ತಿಲ್ಲ. ಗ್ಯಾರಂಟಿ ಬಗ್ಗೆ ಏನೂ ಚರ್ಚೆ ಆಗಲ್ಲ. ಬೇರೆ ವಿಚಾರಕ್ಕೆ ಕರೆದಿದ್ದಾರೆ. ಗ್ಯಾರಂಟಿ ಅಥಾವಾ ಆಹಾರ ಇಲಾಖೆಗೆ ಸಂಬಂಧಿಸಿದಂತೆ ನಾನೇ ಸಭೆ ಕರೆಯುವೆ ಎಂದು ಸಚಿವ ಮುನಿಯಪ್ಪ ತಿಳಿಸಿದರು.ಅನ್ನಭಾಗ್ಯ ಪರಿಷ್ಕರಣೆ jk02_new jk02 new

Key words: Annabhagya, revision, ineligible, people, Minister, K.H. Muniyappa