Sunday, September 13, 2026

BDA Apartments

Home Front Page ಮುಂದಿನ ಟಾರ್ಗೆಟ್ ನಾನೇ ಎಂದು ಪ್ರಚಾರ: ಸಿದ್ದರಾಮಯ್ಯ, ಡಿಕೆಶಿ ಜೊತೆ ಚರ್ಚೆ ಮಾಡ್ತೇನೆ- ಸಚಿವ ಜಮೀರ್

ಮುಂದಿನ ಟಾರ್ಗೆಟ್ ನಾನೇ ಎಂದು ಪ್ರಚಾರ: ಸಿದ್ದರಾಮಯ್ಯ, ಡಿಕೆಶಿ ಜೊತೆ ಚರ್ಚೆ ಮಾಡ್ತೇನೆ- ಸಚಿವ ಜಮೀರ್

ಬೆಂಗಳೂರು,ಏಪ್ರಿಲ್,15,2026 (www.justkannada.in): ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಅಬ್ದುಲ್ ಜಬ್ಬಾರ್ ರನ್ನು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ಅಮಾನತು ಮಾಡಲಾಗಿದ್ದು ಇತ್ತ ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ಅವರನ್ನು ಬಿಡುಗಡೆಗೊಳಿಸಲಾಗಿದೆ. ಮುಂದಿನ ಟಾರ್ಗೆಟ್ ಸಚಿವ ಜಮೀರ್ ಅಹ್ಮದ್ ಖಾನ್ ಎಂಬ ಸುದ್ದಿ ಹರಡಿದೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಸ್ವತಃ ಸಚಿವ ಜಮೀರ್ ಅಹ್ಮದ್ ಖಾನ್ ಮಾತನಾಡಿದ್ದಾರೆ. ಮುಂದಿನ ಟಾರ್ಗೆಟ್ ನಾನೇ ಎಂದು ಮಾಧ್ಯಮಗಳಲ್ಲಿ ಬರುತ್ತಿದೆ. ನಿನ್ನೆ ಸಿಎಂ ಸಿದ್ದರಾಮಯ್ಯ ಜೊತೆ ಚರ್ಚೆ ಮಾಡಿದ್ದೇನೆ.  ನಾಳೆ ಡಿಕೆ ಶಿವಕುಮಾರ್ ರನ್ನೂ ಕೂಡ ಭೇಟಿ ಮಾಡಿ ಚರ್ಚಿಸುತ್ತೇನೆ ಎಂದರು.

ಕೇರಳಕ್ಕೆ ನಾನು ಪಾರ್ಟಿ ಕೆಲಸ ಮಾಡುವುದಕ್ಕೆ ಹೋಗಿದ್ದು ಮೋಜು ಮಸ್ತಿ ಮಾಡುವುದಕ್ಕೆ ಕಳ್ಳಾಟ ಆಡಲು ಹೋಗಿರಲಿಲ್ಲ.  ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಹಾಲಿಡೇಸ್ ಹೋಗಿದ್ರೆ ತಪ್ಪು. ಹಗಲು ರಾತ್ರಿ ಬಿಸಿಲು  ಎನ್ನದೇ ಪಕ್ಷದ ಕೆಲಸ ಮಾಡಿದ್ದೇನೆ. ದಿನಕ್ಕೆ 350  ಕಿ.ಮೀ ಪ್ರಯಾಣಿಸಿ ಪ್ರಚಾರ ಮಾಡಿದ್ದೇನೆ ಹೈಕಮಾಂಡ್ ಕೊಟ್ಟ ಕೆಲಸ ಮಾಡಲು ತಾನೇ ನಾನು ಹೋಗಿದ್ದು ಏ.7ರವರೆಗೆ ಕೇರಳದಲ್ಲಿ ಇರುವುದಕ್ಕೆ ನನಗೆ ಹೇಳಿದ್ದರು. ಆದರೆ ಸಿಎಂ ಫೋನ್ ಮಾಡಿ ಪ್ರಚಾರ ಮಾಡು ಬಾ ಅಂದರು. ಅದಕ್ಕಾಗಿ ನಾನು ಬಾಗಲಕೋಟೆ ದಾವಣಗೆರೆಗೆ ಹೋಗಿದ್ದೆ ನನ್ನನ್ನು ಕರೆದಿದ್ದರೆ ಮತ್ತೆ ಪ್ರಚಾರಕ್ಕೆ ಹೋಗುತ್ತಿದ್ದೆ ಎಂದರು.

ಸಿಎಂ ರಾಜಕೀಯ  ಕಾರ್ಯದರ್ಶಿ ನಸೀರ್ ಅಹ್ಮದ್ ವಜಾ ಮಾಡಿದ್ದರಿಂದ ನನಗೂ ಬೇಸರವಾಗಿದೆ ನಸೀರ್ ಅಹ್ಮದ್ ಕಾಂಗ್ರೆಸ್ ಪಾರ್ಟಿಯಲ್ಲಿ ತುಂಬಾ ಹಿರಿಯರು  ನಸೀರ್ ಅಹ್ಮದ್ ಗೆ ಸಮಾಧಾನ ಮಾಡಲು ಪ್ರಯತ್ನಿಸುತ್ತೇನೆ. ನಾನು ಬಹಳ ಸಣ್ಣವನು ನಾನು ಪಕ್ಷದ ಸೇವಕ ಯಾವತ್ತೂ ನಾನು ಜಾತಿ ರಾಜಕರಣ ಮಾಡಲ್ಲ. ಯಾರೂ ಕೂಡ ನನ್ನ ಹೆಸರು ಹೇಳಿ ಆರೋಪ ಮಾಡಿಲ್ಲ. ಇಂತವರು ತಪ್ಪು ಮಾಡಿದ್ದಾರೆ ಅಂತ ಹೆಸರು ಹೇಳಬೇಕಲ್ವಾ ಯಾರೂ ಹೆಸರು ಹೇಳದೆಯೇ ನನ್ನ ಮೇಲೆ ಹೇಳಿದರೆ ಹೇಗೆ?   ಎಂದು ಪ್ರಶ್ನಿಸಿದರು.

Key words: next target, discuss, Siddaramaiah, DK Shivakumar, Minister, Jameer