Thursday, September 17, 2026

BDA Apartments

ಗ್ಯಾರಂಟಿ ಯೋಜನೆ ಜಾರಿ ಬಗ್ಗೆ ಸಚಿವರು ಹಾರಿಕೆ ಉತ್ತರ ನೀಡಬಾರದು- ಶಾಸಕ ಟಿ.ಬಿ ...
Home Front Page ಗ್ಯಾರಂಟಿ ಯೋಜನೆ ಜಾರಿ ಬಗ್ಗೆ ಸಚಿವರು ಹಾರಿಕೆ ಉತ್ತರ ನೀಡಬಾರದು- ಶಾಸಕ ಟಿ.ಬಿ ಜಯಚಂದ್ರ.

ಗ್ಯಾರಂಟಿ ಯೋಜನೆ ಜಾರಿ ಬಗ್ಗೆ ಸಚಿವರು ಹಾರಿಕೆ ಉತ್ತರ ನೀಡಬಾರದು- ಶಾಸಕ ಟಿ.ಬಿ ಜಯಚಂದ್ರ.

ಬೆಂಗಳೂರು,ಮೇ,29,2023(www.justkannada.in):  ಗ್ಯಾರಂಟಿ ಯೋಜನೆ ಜಾರಿ ಬಗ್ಗೆ ಸಚಿವರು ಹಾರಿಕೆ ಉತ್ತರ ನೀಡಬಾರದು. ಇದರಿಂದ ಜನರಿಗೆ ಗೊಂದಲ ಉಂಟಾಗುತ್ತದೆ ಎಂದು ಶಿರಾ ಕ್ಷೇತ್ರದ ಶಾಸಕ ಟಿ.ಬಿ.ಜಯಚಂದ್ರ ಸಲಹೆ ನೀಡಿದರು.

ಈ ಕುರಿತು ಇಂದು ಮಾತನಾಡಿದ ಶಾಸಕ ಟಿ.ಬಿ ಜಯಚಂದ್ರ,  ಗ್ಯಾರಂಟಿ ಜಾರಿ ಬಗ್ಗೆ ಸಂಪುಟ ಸಭೆಯಲ್ಲಿ ತೀರ್ಮಾನ ಆಗಬೇಕು. ಸಂಪನ್ಮೂಲ ಕ್ರೋಡೀಕರಿಸಿ ಚರ್ಚಿಸಿ ಒಂದು ನಿರ್ಧಾರಕ್ಕೆ ಬರಬೇಕು. ನಿರ್ಧಾರಕ್ಕೆ ಬರುವವರೆಗೂ ಸಚಿವರು ವಿಶ್ಲೇಷಣೆ ಮೂಡುವುದು ತಪ್ಪು.ಗ್ಯಾರಂಟಿ ಯೋಜನೆ ಜಾರಿ ಬಗ್ಗೆ ಸಚಿವರು ಹಾರಿಕೆ ಉತ್ತರ ನೀಡಬಾರದು tb jayachandra

ಹಾರಿಕೆ ಉತ್ತರ ನೀಡಿದರೆ ಜನರ ಮನಸಿನಲ್ಲಿ ಗೊಂದಲ ಮಾಡುತ್ತದೆ. ಹಾಗಾಗಿ ಮಂತ್ರಿಗಳು ಮಾತನಾಡಬಾರದು ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು.

Key words: minister – implementation – guarantee –scheme-MLA -TB Jayachandra