ಕಾಂತರಾಜು ವರದಿಗೂ, ಎಸ್.ಸಿ ಒಳಮೀಸಲಾತಿ ಸಮೀಕ್ಷೆಗೂ ಸಂಬಂಧ ಇಲ್ಲ- ಸಚಿವ ಹೆಚ್.​​ಸಿ ಮಹದೇವಪ್ಪ

ಬೆಂಗಳೂರು, ಮೇ, 5,2025 (www.justkannada.in): ಕರ್ನಾಟಕ ಒಳಮೀಸಲಾತಿ ಜಾತಿ ಗಣತಿ ಸಮೀಕ್ಷೆಗೆ ರಾಜ್ಯ ಸರ್ಕಾರ ಮುಂದಾಗಿದ್ದು ಈ ಕುರಿತು ಪ್ರತಿಕ್ರಿಯಿಸಿರುವ ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ ಮಹದೇವಪ್ಪ, ಇದು ಪರಿಶಿಷ್ಟಜಾತಿ ಸಮುದಾಯಕ್ಕೆ ಮಾಡುತ್ತಿರುವ ಸಮೀಕ್ಷೆಯಾಗಿದ್ದು ಕಾಂತರಾಜು ವರದಿಗೂ ಈ ಸಮೀಕ್ಷೆಗೂ ಸಂಬಂಧ ಇಲ್ಲ ಎಂದು ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಹೆಚ್.​ಸಿ ಮಹದೇವಪ್ಪ, ಎಸ್​ಸಿ ಒಳ ಮೀಸಲಾತಿ ಸಮೀಕ್ಷೆ ಇದೊಂದು ಚಾರಿತ್ರಿಕವಾದದ್ದು. ಪರಿಶಿಷ್ಟ ಜಾತಿ ಅನ್ನೋದು ಜಾತಿ ಅಲ್ಲ, ಅದೊಂದು ಗುಂಪು. ಪರಿಶಿಷ್ಟ ಜಾತಿ ಸಮುದಾಯದ ದತ್ತಾಂಶಗಳ ಸಂಗ್ರಹಕ್ಕಾಗಿ ಸುಪ್ರೀಂಕೋರ್ಟ್​ ನಿರ್ದೇಶನದಂತೆ ಸಮೀಕ್ಷೆ ಮಾಡಲಾಗುತ್ತಿದೆ. ಪರಿಶಿಷ್ಟ ಜಾತಿಗಳಲ್ಲಿನ 101 ಜಾತಿಗಳ ಜನಸಂಖ್ಯೆ ತಿಳಿಯಲು ಒಳಮೀಸಲಾತಿ ಜಾರಿಗೆ ಗಣತಿ ಮಾಡುತ್ತಿದ್ದೇವೆ. ಗಣತಿ ಕಾರ್ಯಕ್ಕೆ ಅಂದಾಜು 100 ಕೋಟಿ ರೂ ಹಣ ಖರ್ಚು ಆಗಲಿದೆ ಎಂದು ತಿಳಿಸಿದರು.

ಇದು ಎಸ್.​​ಸಿ ಅವರಿಗೆ ಮಾತ್ರ ಈ ಸಮೀಕ್ಷೆ. ಇದು ಎಂಪರಿಕಲ್ ಡಾಟಾ ಕಲೆಕ್ಟ್ ಮಾಡುವುದು ಅಷ್ಟೇ. ಈ ಸಮೀಕ್ಷೆಗೆ ಎಡಗೈ ಮತ್ತು ಬಲಗೈನವರ ಒಮ್ಮತ ಇದೆ. ಯಾರು ಕೂಡ ಸುಳ್ಳು ಹೇಳೋಕೆ‌ ಆಗಲ್ಲ. ಕಾಂತರಾಜು ವರದಿಯಲ್ಲಿ, ನ್ಯಾಷನಲ್ ಸಮೀಕ್ಷೆಯಲ್ಲಿ ಅಂಕಿ-ಅಂಶ ಇಲ್ಲ. ಹೀಗಾಗಿ ಯಾರು ಕೂಡ ಅನುಮಾನ ಪಡುವ ಹಾಗಿಲ್ಲ. ಯಾರು, ಎಷ್ಟು ಜನ ಇದ್ದಾರೆ ಅಂತಾ ಯಾರಿಗೂ ಸಹ ಗೊತ್ತಿಲ್ಲ ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

Key words: SC, internal reservation, survey, Minister, H.C. Mahadevappa