Friday, September 25, 2026

BDA Apartments

Priority BDA JK_Adv BDA Adv
Home Front Page ಯೋಜಿತ ನಗರೀಕರಣ, ಗುಣಮಟ್ಟದ ಮೂಲಸೌಕರ್ಯಕ್ಕೆ ಆದ್ಯತೆ ಅಗತ್ಯ- ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ

ಯೋಜಿತ ನಗರೀಕರಣ, ಗುಣಮಟ್ಟದ ಮೂಲಸೌಕರ್ಯಕ್ಕೆ ಆದ್ಯತೆ ಅಗತ್ಯ- ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ

ಬೆಂಗಳೂರು, ಸೆಪ್ಟೆಂಬರ್, 25, 2026 (www.justkannada.in): ಬೆಂಗಳೂರು ಸೇರಿದಂತೆ ರಾಜ್ಯದ ನಗರಗಳ ಸಮಗ್ರ ಅಭಿವೃದ್ಧಿಗೆ ಯೋಜಿತ ನಗರೀಕರಣ, ಗುಣಮಟ್ಟದ ಮೂಲಸೌಕರ್ಯ, ಸುಸ್ಥಿರ ಅಭಿವೃದ್ಧಿ ಹಾಗೂ ಹೂಡಿಕೆಗೆ ಪೂರಕವಾದ ವಾತಾವರಣ ಅತ್ಯಂತ ಅಗತ್ಯ ಎಂದು ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ಬೆಂಗಳೂರಿನ ಗೋಕುಲಂ ಗ್ರ್ಯಾಂಡ್ ಹೋಟೆಲ್‌ನಲ್ಲಿ ಇಂದು ಟೈಮ್ಸ್ ಗ್ರೂಪ್ ಹಾಗೂ ವಿಜಯ ಕರ್ನಾಟಕ ಸಂಸ್ಥೆಯ ವತಿಯಿಂದ ಆಯೋಜಿಸಿದ್ದ ‘VK Real Estate Summit 2026’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು, ರಿಯಲ್ ಎಸ್ಟೇಟ್ ಕ್ಷೇತ್ರದ ಪ್ರಸ್ತುತ ಬೆಳವಣಿಗೆಗಳು ಹಾಗೂ ಭವಿಷ್ಯದ ಸಾಧ್ಯತೆಗಳ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡರು.

ರಿಯಲ್ ಎಸ್ಟೇಟ್ ಕ್ಷೇತ್ರವು ಕೇವಲ ಕಟ್ಟಡ ನಿರ್ಮಾಣ ಅಥವಾ ಆಸ್ತಿ ಹೂಡಿಕೆಗೆ ಸೀಮಿತವಾಗಿಲ್ಲ. ಇದು ಉದ್ಯೋಗ ಸೃಷ್ಟಿ, ಆರ್ಥಿಕ ಚಟುವಟಿಕೆಗಳ ವಿಸ್ತರಣೆ ಹಾಗೂ ನಗರಗಳ ಭವಿಷ್ಯದ ರೂಪುರೇಷೆಗಳನ್ನು ನಿರ್ಧರಿಸುವ ಪ್ರಮುಖ ಕ್ಷೇತ್ರವಾಗಿದೆ ಎಂದು ಸಚಿವ ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ನಗರಗಳ ಬೆಳವಣಿಗೆಯೊಂದಿಗೆ ರಸ್ತೆ, ನೀರು, ಒಳಚರಂಡಿ, ಸಾರ್ವಜನಿಕ ಸಾರಿಗೆ, ತ್ಯಾಜ್ಯ ನಿರ್ವಹಣೆ, ಹಸಿರು ಪ್ರದೇಶಗಳು ಹಾಗೂ ಇತರೆ ನಾಗರಿಕ ಮೂಲಸೌಕರ್ಯಗಳು ಸಮರ್ಪಕವಾಗಿ ಅಭಿವೃದ್ಧಿಯಾಗಬೇಕು. ನಗರಾಭಿವೃದ್ಧಿ ಮತ್ತು ರಿಯಲ್ ಎಸ್ಟೇಟ್ ಕ್ಷೇತ್ರದ ಬೆಳವಣಿಗೆ ಪರಸ್ಪರ ಪೂರಕವಾಗಿ ಸಾಗಿದಾಗ ಮಾತ್ರ ಸುಸ್ಥಿರ ಹಾಗೂ ಜನಕೇಂದ್ರಿತ ನಗರಾಭಿವೃದ್ಧಿ ಸಾಧ್ಯ ಎಂದು ಅವರು ತಿಳಿಸಿದರು.

ನಗರಾಭಿವೃದ್ಧಿಯ ಅಗತ್ಯತೆಗಳು ಮತ್ತು ರಿಯಲ್ ಎಸ್ಟೇಟ್ ಕ್ಷೇತ್ರದ ಬೆಳವಣಿಗೆ ಪರಸ್ಪರ ಪೂರಕವಾಗುವಂತೆ, ಸಾರ್ವಜನಿಕ ಹಿತಾಸಕ್ತಿಯನ್ನು ಕೇಂದ್ರದಲ್ಲಿಟ್ಟುಕೊಂಡು ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಕಾರ್ಯಕ್ರಮದಲ್ಲಿ ವಿಚಾರ ವಿನಿಮಯ ನಡೆಯಿತು.Priority yathindra siddaramaiah yathindra siddaramaiah 3

ನಗರವನ್ನು ನಾವು ನಿರ್ಮಿಸುವ ಕಟ್ಟಡಗಳಿಂದ ಮಾತ್ರ ಅಳೆಯಲು ಸಾಧ್ಯವಿಲ್ಲ. ಅದರ ಸುತ್ತ ಸೃಷ್ಟಿಯಾಗುವ ಬದುಕು, ಜೀವನೋಪಾಯ ಮತ್ತು ಅವಕಾಶಗಳೇ ನಗರದ ನಿಜವಾದ ಸ್ವರೂಪವನ್ನು ನಿರ್ಧರಿಸುತ್ತವೆ,” ಎಂಬ ಆಶಯವನ್ನು ಸಚಿವ ಯತೀಂದ್ರ ಸಿದ್ದರಾಮಯ್ಯ ವ್ಯಕ್ತಪಡಿಸಿದರು.

ಕರ್ನಾಟಕದ ನಗರಾಭಿವೃದ್ಧಿ ಬೆಂಗಳೂರಿಗೆ ಮಾತ್ರ ಸೀಮಿತವಾಗದೆ, ರಾಜ್ಯದ ವಿವಿಧ ನಗರಗಳು ಹಾಗೂ ಪ್ರದೇಶಗಳ ಸಮತೋಲಿತ ಅಭಿವೃದ್ಧಿಗೆ ಆದ್ಯತೆ ನೀಡುವ ಅಗತ್ಯವಿದೆ. ಹೂಡಿಕೆ, ಉದ್ಯೋಗ ಮತ್ತು ಮೂಲಸೌಕರ್ಯಗಳ ಅವಕಾಶಗಳು ರಾಜ್ಯದಾದ್ಯಂತ ವಿಸ್ತರಿಸಬೇಕು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಟೈಮ್ಸ್ ಗ್ರೂಪ್‌ನ ಡಿಜಿಟಲ್ ವಿಭಾಗವಾದ ಟೈಮ್ಸ್ ಇಂಟರ್‌ನೆಟ್‌ನ ಗ್ರೂಪ್ ಬಿಸಿನೆಸ್ ಹೆಡ್ ಶ್ರೀರಾಮ್ ಹೆಬ್ಬಾರ್, ವಿಜಯ ಕರ್ನಾಟಕ ವೆಬ್ (ಡಿಜಿಟಲ್) ಆವೃತ್ತಿಯ ಸಂಪಾದಕ ಶ್ರೀ ಪ್ರಸಾದ್ ನಾಯಕ್ ಹಾಗೂ ವಿವಿಧ ರಿಯಲ್ ಎಸ್ಟೇಟ್ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.planned jk02

 

English Summary
Title

Karnataka Urban Development: Dr. Yathindra Siddaramaiah on Planned Infrastructure

Short Description
Karnataka's urban future depends on modern, inclusive, and sustainable cities according to Dr. Yathindra Siddaramaiah, the Hon’ble Minister for Urban Development, Government of Karnataka. Planned urbanization and quality infrastructure are essential for driving the state's economic growth. Key priorities include integrated governance, innovative infrastructure financing, 24/7 drinking water, sustainable public mobility, and a circular water economy. By building climate-resilient cities, Karnataka aims to improve life quality and attract robust investments.
Keywords
Priority, planned, urbanization, quality, infrastructure, essential, Minister, Dr. Yathindra Siddaramaiah