Thursday, October 15, 2026

Dasara Wishes

Strengthening DasraWishes_JK DasraWishes JK
Happy Dasara
Home Front Page ಉರ್ದು ಭಾಷೆಯಲ್ಲಿ ಸರ್ಕಾರದ ಆಹ್ವಾನ ಪತ್ರಿಕೆ: ಸಮರ್ಥಿಸಿಕೊಂಡ ಸಚಿವ ದಿನೇಶ್ ಗುಂಡೂರಾವ್

ಉರ್ದು ಭಾಷೆಯಲ್ಲಿ ಸರ್ಕಾರದ ಆಹ್ವಾನ ಪತ್ರಿಕೆ: ಸಮರ್ಥಿಸಿಕೊಂಡ ಸಚಿವ ದಿನೇಶ್ ಗುಂಡೂರಾವ್

ಬೆಂಗಳೂರು,ಫೆಬ್ರವರಿ,25,2026 (www.justkannada.in): ಉರ್ದು ಭಾಷೆಯಲ್ಲಿ ಸರ್ಕಾರದ ಆಹ್ವಾನ ಪತ್ರಿಕೆ ಪ್ರಕಟವಾಗಿರುವುದಕ್ಕೆ ಒಲೈಕೆ ರಾಜಕಾರಣ ಎಂಬ ಟೀಕೆಗಳು ಬಂದ ಹಿನ್ನೆಲೆಯಲ್ಲಿ ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿ  ಉರ್ದು ಭಾಷೆಯಲ್ಲಿ ಸರ್ಕಾರದ ಆಹ್ವಾನ ಪತ್ರಿಕೆ ಪ್ರಕಟವಾಗಿದ್ದನ್ನು ಸಮರ್ಥಿಸಿಕೊಂಡ ಸಚಿವ ದಿನೇಶ್ ಗುಂಡೂರಾವ್, ಉರ್ದು ಒಂದು ಭಾಷೆ ತಾನೇ.  ಕನ್ನಡ  ಇಂಗ್ಲಿಷ್ ಉರ್ದು ಹಿಂದಿ ಭಾಷೆಯಲ್ಲೂ ಪ್ರಕಟವಾಗಿದೆ. ಉರ್ದು ಓದುವವರು ಇದ್ದಾರೆ ಉರ್ದು ಪತ್ರಿಕೆಗಳು ಸಹ ಇವೆ ಎಂದರು.

ಉರ್ದು ಅಧಿಕೃತ ಭಾಷೇ ಅಲ್ಲದಿದ್ದರೂ ಮಾಹಿತಿ ನೀಡಲು ಹಾಕಿದ್ದೇವೆ.  ಉರ್ದು ಭಾಷೆಯಲ್ಲಿ ಆಹ್ವಾನ ಪತ್ರಿಕೆ  ಪ್ರಕಟಿಸಿದರೇ ತಪ್ಪೇನು?  ಇಂಗ್ಲೀಷ್ ನಲ್ಲಿ ಕೊಟ್ಟರೇ ಅದು  ಇಂಗ್ಲಿಷ್ ಒಲೈಕೆನಾ ಮಾಹಿತಿ ಇರಲಿ ಅಂತಾ ಜಾಹೀರಾತು ಕೊಡುವುದು ಎಂದು ದಿನೇಶ್ ಗುಂಡೂರಾವ್ ಹೇಳಿದರು.

Key words: Government, invitation, Urdu, Minister, Dinesh Gundu Rao