Tuesday, October 6, 2026

BDA Apartments

ನಾಳೆ ರಾಷ್ಟ್ರಪತಿ ಭೇಟಿ ಹಿನ್ನೆಲೆ: ತಲಕಾವೇರಿ- ಭಾಗಮಂಡಲ ದೇವಾಲಯಕ್ಕೆ ಭಕ್ತರ...
Home Front Page ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯ: ಬಿಜೆಪಿಗೆ ಮತ ಕೇಳುವ ನೈತಿಕತೆ ಇಲ್ಲ- ಸಚಿವ ಚಲುವರಾಯಸ್ವಾಮಿ

ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯ: ಬಿಜೆಪಿಗೆ ಮತ ಕೇಳುವ ನೈತಿಕತೆ ಇಲ್ಲ- ಸಚಿವ ಚಲುವರಾಯಸ್ವಾಮಿ

ದಾವಣಗೆರೆ,ಏಪ್ರಿಲ್,4,2026 (www.justkannada.in):  ಕೇಂದ್ರ ಸರ್ಕಾರ ರಾಜ್ಯಕ್ಕೆ ಮಾಡಿರುವ ಅನ್ಯಾಯ ಅಷ್ಟಿಷ್ಟಲ್ಲ. ಹೀಗಾಗಿ ಬಿಜೆಪಿ ಜನರ ಬಳಿ ಮತ ಕೇಳುವ ನೈತಿಕತೆ ಇಲ್ಲ ಎಂದು ಕೃಷಿ ಸಚಿವ ಚಲುರಾಯಸ್ವಾಮಿ ವಾಗ್ದಾಳಿ ನಡೆಸಿದರು.

ದಾವಣಗೆರೆಯಲ್ಲಿ ಇಂದು ಮಾತನಾಡಿದ ಸಚಿವ ಚಲುವರಾಯಸ್ವಾಮಿ,  ಗ್ಯಾರಂಟಿಯಿಂದ ಅಭಿವೃದ್ದಿ ಕುಂಠಿತ ಎಂಬುದೆಲ್ಲಾ ಸುಳ್ಳು. ಈವರೆಗೆ ಪ್ರತಿ ಶಾಸಕರಿಗೆ 80 ಕೋಟಿ ರೂ ಬಿಡುಗಡೆ ಮಾಡಲಾಗಿದೆ.   1.30 ಲಕ್ಷ ಕೋಟಿ ರೂ.  ನೇರವಾಗಿ ರಾಜ್ಯದ ಜನರ ಖಾತೆಗೆ ಹೋಗಿದೆ. ಮಧ್ಯವರ್ತಿಗಳ ಹಾವಳಿ ಇಲ್ಲ.  ಜನರ ಖಾತೆಗೆ ಜಮಾ ಆಗಿದೆ ಎಂದರು.

ಕೇಂದ್ರ ಸರ್ಕಾರ ರಾಜ್ಯಕ್ಕೆ ಮಾಡಿದ ಅನ್ಯಾಯ ಅಷ್ಟಿಷ್ಟಲ್ಲ ಬೇರೆ ರಾಜ್ಯಕ್ಕೆ ಮಾಡದ ಅನ್ಯಾಯ ನಮಗೆ ಆಗಿದೆ. ತಮಿಳುನಾಡಿಗೆ ಮಾಡಿದ ಸಹಾಯ ನಮಗೆ ಮಾಡಿಲ್ಲ. ಈ ಕಾರಣಕ್ಕೆ ಬಿಜೆಪಿಗೆ ಮತ ಕೇಳುವ ನೈತಿಕತೆ ಇಲ್ಲ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದರು.

Key words: Injustice, BJP, no morals, votes, Minister, Chaluvarayaswamy