Tuesday, October 6, 2026

BDA Apartments

ನಾಡು ಕಂಡ ಶ್ರೇಷ್ಠ ಮುತ್ಸದ್ಧಿ ರಾಜಕಾರಣಿ ಎಸ್.ಎಂ ಕೃಷ್ಣ: ಅವರ ಆಡಳಿತ ವೈಖರಿ ರ...
Home Front Page  ನೆರೆ ಸಂತ್ರಸ್ತರಿಗೆ ಅದಷ್ಟು ಬೇಗ ನೆರವು ಕೊಡಿಸುವ ಕೆಲಸ-ಸಚಿವ ಸಿ,ಸಿ ಪಾಟೀಲ್ ಹೇಳಿಕೆ…

 ನೆರೆ ಸಂತ್ರಸ್ತರಿಗೆ ಅದಷ್ಟು ಬೇಗ ನೆರವು ಕೊಡಿಸುವ ಕೆಲಸ-ಸಚಿವ ಸಿ,ಸಿ ಪಾಟೀಲ್ ಹೇಳಿಕೆ…

ಬೆಂಗಳೂರು,ಅ,16,2019(www.justkannada.in):  ನೆರೆ ಸಂತ್ರಸ್ತರಿಗೆ ಅದಷ್ಟು ಬೇಗ ನೆರವು ಕೊಡಿಸುವ ಕೆಲಸ ಮಾಡುತ್ತೇನೆ ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ ಪಾಟೀಲ್ ತಿಳಿಸಿದರು.

ಬೆಂಗಳೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಸಿ.ಸಿ ಪಾಟೀಲ್, ಕಳೆದ ಮೂರು ದಿನಗಳಿಂದ ನಾನು ಬೆಂಗಳೂರಿನಲ್ಲಿ ಇದ್ದೆ. ಇಂದು ನನ್ನ ಸ್ವಕ್ಷೇತ್ರಕ್ಕೆ ತೆರಳುತ್ತಿದ್ದೇನೆ ಅದಷ್ಟು ಬೇಗ ನೆರೆ ಸಂತ್ರಸ್ತರಿಗೆ ಪರಿಹಾರ ಕೊಡಿಸುವ ಕೆಲಸ ಮಾಡುತ್ತೇನೆ ಎಂದರು.

ಸರ್ವೆಯಲ್ಲಿ ಸ್ವಲ್ಪ ಲೋಪವಾಗಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ನೆರೆ ಸಂತ್ರಸ್ತರಿಗೆ ತೊಂದರೆಯಾಗದಂತೆ ನೋಡಿಕೊಳ್ತೇವೆ. ಅಧಿಕಾರಿಗಳು ಸಹ ಕಾಳಜಿ ವಹಿಸಿ ಕೆಲಸ ಮಾಡುತ್ತಿದ್ದಾರೆ ಎಂದು ಸಚಿವ ಸಿ.ಸಿ ಪಾಟೀಲ್ ತಿಳಿಸಿದರು.

Key words: minister- CC Patil-flood relief-gadag-bangalore