Friday, August 21, 2026

BDA Apartments

Home Front Page  ಹಲಾಲ್ ವಿಚಾರದಲ್ಲಿ ಸರ್ಕಾರ ಮೂಗು ತೂರಿಸುವುದಿಲ್ಲ- ಸಚಿವ ಬಿ.ಸಿ ನಾಗೇಶ್ ಸ್ಪಷ್ಟನೆ.

 ಹಲಾಲ್ ವಿಚಾರದಲ್ಲಿ ಸರ್ಕಾರ ಮೂಗು ತೂರಿಸುವುದಿಲ್ಲ- ಸಚಿವ ಬಿ.ಸಿ ನಾಗೇಶ್ ಸ್ಪಷ್ಟನೆ.

ಮಡಿಕೇರಿ,ಮಾರ್ಚ್,31,2022(www.justkannada.in): ಹಲಾಲ್ ಎಂಬುದು ಧಾರ್ಮಿಕ ಆಚರಣೆ. ಹಲಾಲ್ ವಿಚಾರದಲ್ಲಿ ಸರ್ಕಾರ ಮೂಗು ತೂರಿಸಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ತಿಳಿಸಿದ್ದಾರೆ.

ಮಡಿಕೇರಿಯಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಬಿಸಿ ನಾಗೇಶ್, ಹಲಾಲ್ ಧಾರ್ಮಿಕ ಆಚರಣೆ ಅದು ನಿನ್ನೆ ಮೊನ್ನೆವರೆಗೆ ಯಾರಿಗೂ ಗೊತ್ತಿರಲಿಲ್ಲ. ಇದು ಸರ್ಕಾರದ ನಿಯಮವೇನು ಅಲ್ಲ. ಇಷ್ಟವಿದ್ದವರು ಅಂಗಡಿಗಳಲ್ಲಿ ಸ್ವೀಕರಿಸುತ್ತಾರೆ. ಇಲ್ಲದಿದ್ದರೇ ಬೇರೆ ಅಂಗಡಿಗೆ ಹೋಗುತ್ತಾರೆ ಎಂದರು.

ಹಲಾಲ್ ಸ್ವೀಕರಿಸಿವುದು ಬಿಡುವುದು ಅವರ ಇಚ್ಛೆ. ಈ ವಿಚಾರದಲ್ಲಿ ಸರ್ಕಾರ ಮೂಗು ತೂರಿಸುವುದಿಲ್ಲ ಎಂದು ಬಿಸಿ ನಾಗೇಶ್ ತಿಳಿಸಿದರು.

Key words: minister-BC Nagesh-halal