“ಮನಸ್ಸಿಗೆ ಮೊಳೆ ಹೊಡೆಯುವ ಕೆಲಸ” : ಎಚ್.ಡಿ.ಕೆ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಆಕ್ರೋಶ

ಬೆಂಗಳೂರು,ಫೆಬ್ರವರಿ,16,2021(www.justkannada.in) : ಜೆಡಿಎಸ್‌ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರು ಮನಸ್ಸಿಗೆ ಮೊಳೆ ಹೊಡೆಯುವ ಕೆಲಸ ಮಾಡುತ್ತಿದ್ದಾರೆ. ಅದು ಅವರಿಗೆ ಶ್ರೇಯಸ್ಸಲ್ಲ  ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.jkರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡದ ಮನೆಗಳ ಮುಂದೆ ಮಾರ್ಕ್‌ ಹಾಕಲಾಗುತ್ತಿದೆ ಎಂದು ಕುಮಾರಸ್ವಾಮಿ ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಎಲ್ಲಿ, ಯಾರ ಮನೆಗೆ ಮೊಳೆ ಹೊಡೆಯಲಾಗಿದೆ ಎಂಬುದನ್ನು ಅವರು ಸ್ಪಷ್ಟಪಡಿಸಬೇಕು ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ.

ಈ ರೀತಿಯ ಹೇಳಿಕೆ ಅವರ ಸ್ಥಾನ, ಘನತೆ, ಕುಟುಂಬಕ್ಕೆ ಗೌರವ ತರುವ ಸಂಗತಿಯಲ್ಲ. ಆತ್ಮವಂಚನೆಯಿಂದ ಮಾತನಾಡುವುದು ದುರದೃಷ್ಟಕರ ಎಂದು ಕಿಡಿಕಾರಿದ್ದಾರೆ.Mind,Nail,Striking,Work,Cellphone,Showroom,opposite,BJP National,Prime,Secretary,C.T.Ravi,outrage

ಜನರು ಸ್ವಯಂಪ್ರೇರಿತವಾಗಿ ರಾಮಮಂದಿರಕ್ಕೆ ಹಣ ನೀಡುತ್ತಿದ್ದಾರೆ. ಗುರಿ ಇದ್ದದ್ದು  1,000 ಕೋಟಿ, ಈಗಾಗಲೇ 1511 ಕೋಟಿಗೂ ಅಧಿಕ ಹಣ ಸಂಗ್ರಹವಾಗಿದೆ. ಇನ್ನೂ  500 ಕೋಟಿಗೂ ಹೆಚ್ಚು ದೇಣಿಗೆ ಸಂಗ್ರಹವಾಗುವ ನಿರೀಕ್ಷೆ ಇದೆ. ಭಕ್ತಿಯಿಂದ ಕೊಡುವ ದೇಣಿಗೆ ಬೇಕೇ ಹೊರತು, ದಬಾಯಿಸಿ ತೆಗೆದುಕೊಳ್ಳುವ ಅಗತ್ಯ ಇಲ್ಲ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಅವ್ರು ದೆಹಲಿಗೆ ಏಕೆ ಭೇಟಿ ಕೊಟ್ಟಿದ್ದಾರೋ ಗೊತ್ತಿಲ್ಲ…

ಸಿದ್ದರಾಮಯ್ಯ ಅವ್ರು ದೆಹಲಿಗೆ ಏಕೆ ಭೇಟಿ ಕೊಟ್ಟಿದ್ದರೋ ಗೊತ್ತಿಲ್ಲ. ಅವರಿಗೂ ಡಿಕೆಶಿವಕುಮಾರ್ ಮುಸುಕಿನ ಗುದ್ದಾಟದ ಕಾರಣಕ್ಕೆ ಭೇಟಿ ನೀಡಿರಬಹುದು. ಹಿಂದೆ ಜಿನ್ನಾಗೆ ನಿಲುವಿಗೆ ಸಮರ್ಥನೆ ಕೊಟ್ಟ ಕಾರಣಕ್ಕೆ ದೇಶವೇ ತುಂಡಾಗುವ ಪರಿಸ್ಥಿತಿ ಬಂತು. ಆ ಪರಿಸ್ಥಿತಿಯಿಂದ ಪಾಠ ಕಲಿತಿಲ್ಲ ಕಾಂಗ್ರೆಸ್ ಅನ್ನೋದು ಸ್ಪಷ್ಟವಾಗುತ್ತೆ. ಇವತ್ತು ಅಂತಹದ್ದೆ ಕೆಲಸವನ್ನು ಮಾಡುತ್ತಿದೆ. ದೇಶ ಒಡೆಯುವ ಶಕ್ತಿ ಬೆಂಬಲ ಕೊಡುವಂತಹ ಮತ್ತು ಕೈಜೋಡಿಸುವಂತಹ ಸಣ್ಣ ಕೆಲಸ ಕಾಂಗ್ರೆಸ್ ಮಾಡ್ತಾ ಇದೆ. ಇನ್ನೇನೂ ಅಗಬೇಕು ಎಂದು ಬಯಸಿದ್ದೀರಿ.ಇದರಿಂದ ನೀವು ಪಾಠ ಕಲಿತಿಲ್ವಾ…?  ಇತಿಹಾಸದಿಂದ ಪಾಠ ಕಲಿಯದವನೂ ಬದುಕಿನಲ್ಲಿ ಸರಿಹೋಗಲು ಸಾಧ್ಯವಿಲ್ಲ ಎಂದು ಟೀಕಿಸಿದರು.

ಪರಿಸರ ಹೋರಾಟಗಾರ್ತಿ ದಿಶಾ ರವಿ ಬಂಧನ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿ.ಟಿ ರವಿ, ಆರಾಜಕತೆಯನ್ನು ಹುಟ್ಟು ಹಾಕೋದು ಪ್ರಜಾಪ್ರಭುತ್ವದ ಲಕ್ಷಣನಾ..? ಬಂಧನ ಮಾಡಿರೋದು ಅರಾಜಕತೆಯನ್ನು ಸೃಷ್ಟಿ ಮಾಡೋ ಸಂಚಿನಲ್ಲಿ. ಜನವರಿ 26 ಏನಾಯ್ತು ಮುಂದೇನೂ ಮಾಡಬೇಕು ಅನ್ನೋ ಅಕ್ಷನ್ ಪ್ಲಾನ್ ನಲ್ಲಿ ಅನ್ನೋ ಸಂಚು. ದಿಶಾರವಿ ಬಗ್ಗೆ ವೈಭವಿಕರಿಸಿ ಮಾತನಾಡುತ್ತಿದ್ದಾರೆ ಎಂದು ಮಾಜಿ ಸಚಿವ ಸಿ.ಟಿ ರವಿ ಕಿಡಿಕಾರಿದರು.

 

key words : Mind-Nail-Striking-Work-Cellphone-Showroom-opposite-BJP National-Prime-Secretary-C.T.Ravi-outrage