ಮತ್ತೊಂದು ಸರ್ಜಿಕಲ್ ಸ್ಟ್ರೈಕ್..? ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆಯಿಂದ ದಾಳಿ…

ಶ್ರೀನಗರ, ಆ,3,2019(www.justkannada.in):  . ಪಾಕ್ ಆಕ್ರಮಿತ ಕಾಶ್ಮೀರದ ಒಳಗೆ  ಭಾರತೀಯ ಸೇನೆ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ಮಾದರಿಯ ದಾಳಿ ನಡೆಸಿದ್ದು ಉಗ್ರರ ಅಡಗುತಾಣವನ್ನ ಗುರಿಯಾಗಿಸಿ ಕಾರ್ಯಾಚರಣೆ ನಡೆಸಿದೆ.

ಪಾಕ್ ಆಕ್ರಮಿತ ಕಾಶ್ಮೀರದ  ಸುಮಾರು 30 ಕಿ.ಮೀ. ಒಳಗೆ ಹೋಗಿ ಭಾರತೀಯ ಸೇನೆ ದಾಳಿ ನಡೆಸಿದೆ ಎನ್ನಲಾಗಿದೆ.  ಪಿಓಕೆಯಲ್ಲಿ ಉಗ್ರರ ಅಡಗುದಾಣಗಳು ಇರುವ ಬಗ್ಗೆ ಭಾರತದ ಗುಪ್ತಚರ ಸಂಸ್ಥೆ ಖಚಿತ ಮಾಹಿತಿಗಳನ್ನು ನೀಡಿತ್ತು. ಉಗ್ರರು ಭಾರತದೊಳಗೆ ಪ್ರವೇಶಿಸಿ ಭೀಕರ ದಾಳಿಗಳನ್ನು ನಡೆಸುವ ಸಾಧ್ಯತೆ ಇದೆ ಎಂಬ ಎಚ್ಚರಿಕೆ ನೀಡಲಾಗಿತ್ತು. ಈ ಹಿನ್ನಲೆ  ಉಗ್ರರ ದಾಳಿಗೆ ಅವಕಾಶ ನೀಡುವ ಮೊದಲೇ ಭಾರತೀಯ ಸೇನೆ ಉಗ್ರರ ಅಡಗು ತಾಣಗಳನ್ನ ಗುರಿಯಾಗಿಸಿ ದಾಳಿ ನಡೆಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ದಾಳಿ ಸಂದರ್ಭದಲ್ಲಿ ಪಾಕಿಸ್ತಾನದ ಜಲವಿದ್ಯುತ್ ಸ್ಥಾವರ ನೀಲಂ-ಜೇಲಂಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ.ಿನ್ನು ಪಂಜಾಬ್ ಗಡಿಭಾಗದಲ್ಲಿ ಪಾಕ್ ನುಸುಳಿಕೋರನೊಬ್ಬನನ್ನ ಬಂಧಿಸಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ.

Key words: Attack – Indian Army – Pakistani –occupied- Kashmir-terrorist