ಮಿಲನಾ-ಕೃಷ್ಣ ಮದುವೆ ದಿನ ಬಿಡುಗಡೆಯಾಗಲಿದೆ ರೊಮ್ಯಾಟಿಂಗ್ ಸಾಂಗ್ !

ಬೆಂಗಳೂರು, ಜನವರಿ 07, 2021 (www.justkannada.in): ಲವ್ ಮಾಕ್ಟೇಲ್-2 ಚಿತ್ರತಂಡ ಮಿಲನ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ಮದುವೆಗೆ ವಿಶೇಷ ಗಿಫ್ಟ್ ನೀಡಲಿದೆ.

ಯೆಸ್. ಫೆಬ್ರವರಿ 14 ರಂದು ಲವ್ ಮಾಕ್ಟೇಲ್ 2 ಸಿನಿಮಾದ ರೊಮ್ಯಾಂಟಿಕ್ ಸಾಂಗ್ ಬಿಡುಗಡೆಯಾಗಲಿದೆ. ವಿಶೇಷ ಎಂದರೆ ಅದೇ ದಿನ ಕೃಷ್ಣ-ಮಿಲನ ಮದುವೆ!

ಸದ್ಯ ಲವ್ ಮಾಕ್ಟೇಲ್ -2 ಸಿನಿಮಾ ಶೂಟಿಂಗ್ ಕೊನೆಯ ಹಂತದಲ್ಲಿದೆ. ಇದೇ ವೇಳೆ ಚಿತ್ರ ತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸಗಳೂ ನಡೆಯುತ್ತಿವೆ.

ಮೊದಲ ಬಾರಿಗೆ ರಾಚೆಲ್ ಡೇವಿಡ್ ಕನ್ನಡ ಚಲನಚಿತ್ರಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.